ಹೆತ್ತ ಕಂದನನ್ನೇ ಏರ್ ಪೋರ್ಟಿನ ಕ.ಬು.ನಲ್ಲಿ ಬಿಸಾಕಿದ ಮಹಾ ತಾಯಿ

ಏನಾಯಿತೆಂದರೆ ಬ್ರಿಟನ್ನಿನ ಬಾಯ್ ಫ್ರೆಂಡ್ ಜತೆ ಸಮೂಯಿ ದ್ವೀಪಗಳಲ್ಲಿ ಸ್ವಚ್ಚಂದವಾಗಿ ಚಕ್ಕಂದವಾಡಲು ತನ್ನದೇ ಹಸುಗೂಸು ತೊಡಕಾಗಿದ್ದಾಳೆ ಎಂದು ಎಣಿಸಿದ್ದಾಳೆ. ಸರಿ ತಕ್ಷಣ ಐಡಿಯಾ ಮಾಡಿದ ಅವಳು ಮೊನ್ನೆ ಭಾನುವಾರ ಮಗುವಿನ ಕತ್ತು ಹಿಚುಕಿ, ವಿಮಾನ ನಿಲ್ದಾಣದಲ್ಲಿರುವ ಕಸದ ಬುಟ್ಟಿಗೆ ಹಾಕಿ ಶವವನ್ನು ಎಸೆದು, ವಿಮಾನೇರಿ ಪರಾರಿಯಾಗಿದ್ದಾಳೆ.
ಅಂದಹಾಗೆ, ಸಾವಿಗೀಡಾದ ಮಗು ಇವಳಿಗೆ ಬ್ರಿಟನ್ನಿನ ಮತ್ತೊಬ್ಬ ಬಾಯ್ ಫ್ರೆಂಡ್ ವರಪ್ರಸಾದ ಕರುಣಿಸಿದ್ದ. ಹೊಸ ಬಾಯ್ ಫ್ರೆಂಡ್ ಗೆ ಕೂಸು ಇರಿಸುಮುರಿಸು ತರುತ್ತದೆ ಎಂದು ಭಾವಿಸಿ, ಈ ಕುಕೃತ್ಯ ಎಸಗಿರುವುದಾಗಿ ಮಹಾತಾಯಿ ಹೇಳಿಕೊಂಡಿದ್ದಾಳೆ.
ಏರ್ ಪೋರ್ಟಿನ ಸೆಕ್ಯುರಿಟಿ ಗಾರ್ಡ್ ಕಸದಬುಟ್ಟಿಯಲ್ಲಿ ಬಿದ್ದಿದ್ದ ನವಜಾತ ಶಿಶುವಿನ ದೇಹವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಸಿಸಿಟಿವಿ ಮೂಲಕ ಮಹಿಳೆಯನ್ನು ಪತ್ತೆಹಚ್ಚಿದ್ದಾರೆ.












Click it and Unblock the Notifications