ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ ಕೇಸ್ ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್

By Mahesh
|
Google Oneindia Kannada News

HD Kumaraswamy
ಬೆಂಗಳೂರು, ಸೆ,15: ಜಂತಕಲ್ ಮೈನಿಂಗ್ ಲೈಸನ್ಸ್ ಹಾಗೂ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘ ಡಿನೋಟಿಫೈ ಅವ್ಯವಹಾರ ಪ್ರಕರಣ ವಿಚಾರಣೆ ನಡೆಸುತ್ತಿದ್ದ ಹೈ ಕೋರ್ಟ್ ನ್ಯಾಯಮೂರ್ತಿ ಪಿಂಟೋ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ದಂಪತಿ ವಿರುದ್ಧ ವಕೀಲ ವಿನೋದ್ ಕುಮಾರ್ ದೂರು ದಾಖಲಿಸಿದ್ದರು. ಹೈಕೋರ್ಟ್‌ ಸೆ.8 ಗುರುವಾರದಂದು ದಂಪತಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಪಿಂಟೋ ಅವರು ಎಚ್ಡಿಕೆ ದಂಪತಿಗೆ ಬೇಲ್ ಮಂಜೂರು ಮಾಡಿದ್ದರು.

ಏನು ಕಾರಣ?: ಪಿಂಟೋ ಅವರು ಜಡ್ಜ್ ಸ್ಥಾನದಿಂದ ಕೆಳಗಿಳಿಯಲು ಪ್ರಬಲವಾದ ಕಾರಣವಿದೆ. ಎಚ್ಡಿಕೆ ದಂಪತಿ ಅವವ್ಯಹಾರದ ವಿರುದ್ಧ ಅರ್ಜಿ ಸಲ್ಲಿಸಿರುವ ಪಿರ್ಯಾದುದಾರ ವಕೀಲ ವಿನೋದ್ ಕುಮಾರ್ ನ್ಯಾಯಮೂರ್ತಿ ಪಿಂಟೋ ಅವರ ಕೈಕೆಳಗೆ ಸಹಾಯಕವಾಗಿ ಕೆಲಸ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಪಿಂಟೋ ನಿಷ್ಪಕ್ಷಪಾತ ವಿಚಾರಣೆ ನಡೆಯಲಿ ಎಂದು ಅಭಿಪ್ರಾಯಪಟ್ಟು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ, ಈ ಪ್ರಕರಣದ ವಿಚಾರಣೆಗೆ ಹೊಸ ನ್ಯಾಯಾಧೀಶರನ್ನು ವರ್ಗಾಯಿಸಬೇಕಿದೆ.

ನಂತರ ಸೆ.9ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಎಚ್ ಡಿ ಕುಮಾರಸ್ವಾಮಿ ದಂಪತಿಗಳು ಹಾಜರಾಗಿದ್ದರು. ನಂತರ ಸುದ್ದಿಗೋಷ್ಠಿಯಲ್ಲಿ 'ನಾನು ನನ್ನ ವಕೀಲರು ಏನು Instructions ಕೊಟ್ರೋ ಅದರಂತೆ ನಡೆದುಕೊಳ್ಳುವುದು ನನ್ನ ಕರ್ತವ್ಯ' ಎಂದು ಎಚ್ ಡಿಕುಮಾರಸ್ವಾಮಿ ಹೇಳಿದ್ದರು.

English summary
Jantakal Mining Lease Scam : High court Judge Pinto withdraws himself from hearing the case siting reasons HDK Advocate Vinod Kumar was junior to Judge Pinto. Vinod Kumar is the one filed plea against JDs leader HD Kumaraswamy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X