ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರ್ ಗೆ ಮೆಂಟಲ್ ಟ್ರೀಟ್ಮೆಂಟ್ ಅಗತ್ಯವಿದೆ: ಏಮ್ಸ್‌ ವರದಿ

By Srinath
|
Google Oneindia Kannada News

amar-singh-psychiatric-treatment-aiims-report
ನವದೆಹಲಿ, ಸೆ. 15: ವೋಟಿಗಾಗಿ ನೋಟು ಪ್ರಕರಣದಲ್ಲಿ ಜೈಲು ಪಾಲಾಗಿ ಪ್ರಸ್ತುತ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯಸಭೆ ಸದಸ್ಯ ಅಮರ್ ಸಿಂಗ್‌ ಆರೋಗ್ಯಸ್ಥಿತಿ ಕುರಿತ ವರದಿಯನ್ನು ದೆಹಲಿ ಏಮ್ಸ್‌ ವೈದ್ಯರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಮೊನ್ನೆ ನಮ್ಮ ನಾಡಿನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೋರ್ಟಿಗೆ ಹಾಜರಾಗುವ ಮೊದಲು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಅರ್ಧ ಗಂಟೆ ಕಾಲ ಕಳೆದಿದ್ದರು ಎಂಬುದು ಗಮನಾರ್ಹ. ಆದರೆ ಅತ್ತ ಹೈದರಾಬಾದಿನ ಚಂಚಲಗೂಡ ಜೈಲಿಗೆ ಸೇರಿದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಜೈಲು ವಾಸ ತಪ್ಪಿಸಿಕೊಳ್ಳಲು 'ಅನಾರೋಗ್ಯದ ಸಬೂಬು' ಹೇಳದಿರುವುದು ಆಶ್ಚರ್ಯ ತರುತ್ತದೆ.

ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ವೈದ್ಯರು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸಂಗೀತಾ ಧಿಂಗ್ರಾ ಸೆಹಗಲ್‌ ಅವರಿಗೆ ಸಲ್ಲಿಸಿದ್ದು, ಅಮರ್ ಸಿಂಗ್‌ ದೇಹಸ್ಥಿತಿ ಸರಿಯಿಲ್ಲ. ಜತೆಗೆ ಅತಿಯಾದ ಬಳಲಿಕೆಯಿಂದ ಮಾನಸಿಕ ಒತ್ತಡವಿದ್ದು, ಮಾನಸಿಕ ಸಲಹಾ ಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಈ ನಡುವೆ, ಅತಿಸಾರ ಹಿನ್ನೆಲೆಯಲ್ಲಿ ಅಮರ್ ಸಿಂಗ್‌ ಅವರನ್ನು ಏಮ್ಸ್‌ನಲ್ಲಿರುವ ಗಣ್ಯರ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ. ಮತ್ತೂಂದೆಡೆ ಜಾಮೀನು ಕೋರಿ ಅಮರ್ ಸಿಂಗ್‌ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ (ಇಂದು) ಗುರುವಾರ ನಡೆಯಲಿದೆ.

English summary
The medical reports of Rajya Sabha MP Amar Singh submitted by AIIMS before a special court suggests that he needs psychiatric consultation for his 'anxiety and restlessness' and continued to have 'vomitting and diarrhoea'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X