ರಾಮ್ ಲೀಲಾದಿಂದ ಐಟಿ ಕಚೇರಿ ತನಕ :ನ್ಯೂಯಾರ್ಕ್ ಟೈಮ್ಸ್

New York Times Indian version
ನ್ಯೂಯಾರ್ಕ್, ಸೆ.14: ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸುವ ಕಾರ್ಯಕ್ರಮದ ಅಂಗವಾಗಿ ಅಮೆರಿಕದ 'ದಿ ನ್ಯೂಯಾರ್ಕ್ ಟೈಮ್ಸ್" ದೈನಿಕವು ಭಾರತೀಯ ರಾಜಕಾರಣ, ಸಂಸ್ಕೃತಿ, ವ್ಯಾಪಾರ, ಕ್ರೀಡೆ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಸುದ್ದಿ ಹಾಗೂ ವಿಶ್ಲೇಷಣೆಯನ್ನು ನೀಡುವ ಆಂಗ್ಲ ಭಾಷೆಯಲ್ಲಿರುವ 'ಇಂಡಿಯಾ ಇಂಕ್" ಎಂಬ ನೂತನ ಜಾಲತಾಣವೊಂದನ್ನು ಪ್ರಾರಂಭಿಸಿದೆ.

'ನ್ಯೂಯಾರ್ಕ್ ಟೈಮ್ಸ್" ಪ್ರಾರಂಭಿಸಿರುವ ರಾಷ್ಟ್ರ ಕೇಂದ್ರಿತ ಸುದ್ದಿ ಹಾಗೂ ಫಟನಾವಳಿಗಳ ವಿವರ ನೀಡುವ ಮೊತ್ತದ ಮೊದಲ ಜಾಲತಾಣವಾಗಿದೆ. ಭಾರತಕ್ಕೆ ಸಂಬಂಧಿಸಿ ಸುದ್ದಿಗಳನ್ನು ಇಲ್ಲಿ ಪ್ರಕಟಿಸಲಾಗುವುದು ಎಂದು ಪತ್ರಿಕೆ ಹೇಳಿಕೊಂಡಿದೆ.

'ದಿ ನ್ಯೂಯಾರ್ಕ್ ಟೈಮ್ಸ್'ನ ಜಾಗತಿಕ ಸಂಪರ್ಕ ವಿಸ್ತರಣೆಯ ಒಂದು ಭಾಗ ನೂತನ ರಾಷ್ಟ್ರ ಕೇಂದ್ರಿತ ಜಾಲತಾಣ 'ಇಂಡಿಯಾ ಇಂಕ್' ಕಾರ್ಯ ನಿರ್ವಹಿಸಲಿದೆಎಂದು ದೈನಿಕದ ಕಾರ್ಯ ನಿರ್ವಾಹಕ ಸಂಪಾದಕ ಜಿಲ್ ಅಬ್ರಾಮ್ಸನ್ ಹೇಳಿದ್ದಾರೆ.

"ಭಾರತದಲ್ಲಿರುವ ಹಾಗೂ ವಿದೇಶದಲ್ಲಿರುವ ಅಲ್ಲಿನ ಸುದ್ದಿಗಳನ್ನು ತಿಳಿಯಲು ಆಸಕ್ತರಾಗಿರುವ ನಮ್ಮ ಓದುಗರಿಗೆ ಹಾಗೂ ಜಾಹೀರಾತುದಾರರಿಗೆ ಉತ್ತಮ ಸೇವೆಯನ್ನು ಒದಗಿಸಲು ನಮಗೆ ಹರ್ಷವೆನಿಸುತ್ತದೆ.'ಇಂಡಿಯಾ ಇಂಕ್' ಖ್ಯಾತ ಬರಹಗಾರ ಹೀಥರ್ ಟಿಮ್ಮನ್ಸ್ ನೇತೃತ್ವದಲ್ಲಿ ಭಾರತದಲ್ಲಿರುವ 'ದಿ ನ್ಯೂ ಟೈಮ್ಸ್ ಆಫ್ ಇಂಡಿಯಾ' ಹಾಗೂ 'ದಿ ಇಂಟರ್‌ನ್ಯಾಶನಲ್ ಹೆರಾಲ್ಡ್ ಟ್ರಿಬ್ಯೂನ್' ಸಂಪಾದಕತ್ವದಲ್ಲಿ ಪ್ರಕಟಗೊಳ್ಳಲಿದೆ. ಈ ಜಾಲತಾಣಕ್ಕೆ 'ದಿ ನ್ಯೂಯಾರ್ಕ್ ಟೈಮ್ಸ್' ಪತ್ರಕರ್ತರಲ್ಲದೆ ಅಗ್ರ ಭಾರತೀಯ ಲೇಖಕರು ಹಾಗೂ ಭಾರತೀಯ ಸಮುದಾಯದ ಲೇಖಕರು ದೇಣಿಗೆ ನೀಡಲಿದ್ದಾರೆ.

"ನಾವು ದಿಲ್ಲಿಯಲ್ಲಿರುವ ರಾಮ್‌ಲೀಲಾ ಮೈದಾನದಿಂದ ಹಿಡಿದು ಸಿಲಿಕಾನ್ ವ್ಯಾಲಿಯ ಅಧಿಕಾರಿಗಳ ಕೊಠಡಿಯವರೆಗಿನ ಸುದ್ದಿಗಳನ್ನು ಪ್ರಕಟಿಸಲಿದ್ದೇವೆ"" ಎಂದು ಇಂಟರ್‌ನ್ಯಾಶನಲ್ ಹೆರಾಲ್ಡ್ ಟ್ರಿಬ್ಯೂನ್‌ನ ಪ್ರಕಾಶಕ ಸ್ಟೀಫನ್ ಡನ್‌ಬರ್ ಜಾನ್ಸನ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+