ರೆಡ್ಡಿ ಪಾಲಿಗೆ ದುಃಸ್ವಪ್ನವಾದ ಸಿಬಿಐ ಲಕ್ಷ್ಮಿನಾರಾಯಣ ಯಾರು!?

cbi-lakshminarayana-profile-special-director
ಬೆಂಗಳೂರು, ಸೆ.13: (ಅಕ್ರಮ) ಗಣಿವೀರ ಜನಾರ್ದನ ರೆಡ್ಡಿಗೆ ಸಿಬಿಐ ಕುಣಿಕೆ ಬಿಗಿಗೊಳಿಸಿದ ತನಿಖಾಧಿಕಾರಿ ವಿ.ವಿ. ಲಕ್ಷ್ಮಿನಾರಾಯಣ ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವುದು ಒಳಿತು.....

ಲಕ್ಷ್ಮಿನಾರಾಯಣ ಎಂದೇ ಖ್ಯಾತರಾಗಿರುವ ಇವರು ಹೈದರಾಬಾದ್ ವಲಯದ ಸಿಬಿಐನ ವಿಶೇಷ ನಿರ್ದೇಶಕರು. ಚಂಚಲಗೂಡ ಜೈಲಿನಲ್ಲಿ ಈಗಾಗಲೇ ತಣ್ಣಗೆ ಕುಳಿತಿರುವ ದೇಶದ ಮಹಾನ್ ಆರ್ಥಿಕ ಅಪರಾಧಿ ಸತ್ಯಂ ಕಂಪ್ಯೂಟರ್ಸ್ ಕಂಪನಿಯ ರಾಮಲಿಂಗರಾಜುಗೆ ಕಾನೂನು ಕೋಳ ತೊಡಿಸಿದ್ದು ಇದೇ ಲಕ್ಷ್ಮಿನಾರಾಯಣ.

ಇನ್ನು ಆಂಧ್ರದ ಕುಬೇರ ಜಗನ್ (ದಿವಂಗತ ವೈಎಸ್ಆರ್ ಪುತ್ರ) ಆಗಲೋ ಈಗಲೋ ಚಂಚಲಗೂಡ ಜೈಲಿಗೆ ಎಂಟ್ರಿ ಹಾಕುವುದು ಖಚಿತ ಎಂಬ ಪರಿಸ್ಥಿತಿ ನಿರ್ಮಾಣ ಮಾಡಿರುವುದು ಇದೇ ಲಕ್ಷ್ಮಿನಾರಾಯಣ.

ಇಂತಹ ಲಕ್ಷ್ಮಿನಾರಾಯಣ ಅಕ್ರಮವಾಗಿ ಲಕ್ಷ್ಮಿಯನ್ನು ಕೂಡಿಹಾಕಿದವರ ಪಾಲಿಗೆ ಸಿಂಹಸ್ವಪ್ನ. ಚಂದಮಾಮಾ ಕಥೆಗಳಲ್ಲಿ ಓದಿ, ಕೇಳಿದಂತೆ ಅಷ್ಟೈಶ್ವರ್ಯ ಹೊಂದಿರುವ ಭ್ರಷ್ಟರನ್ನು ಬೇತಾಳದಂತೆ ಬೆನ್ನುಹತ್ತುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+