ಮಹಾರಾಷ್ಟ್ರ ಕೇಡರಿನ ಖಡಕ್ ಐಪಿಎಸ್ ಅಧಿಕಾರಿ ಲಕ್ಷ್ಮಿನಾರಾಯಣ

cbi-lakshminarayana-ips-andra-engineer
ಬೆಂಗಳೂರು, ಸೆ.13: 1990ರ ಮಹಾರಾಷ್ಟ್ರ ಕೇಡರ್ ಗೆ ಸೇರಿದ ಖಡಕ್ ಐಪಿಎಸ್ ಅಧಿಕಾರಿ ಲಕ್ಷ್ಮಿನಾರಾಯಣ. ಸರಕಾರಿ ಕಾರಿಗಿಂತ ಬಸ್ಸಿನಲ್ಲೇ ಹೆಚ್ಚಾಗಿ ಇವರ ಪ್ರಯಾಣ, ಯಾಕಪಾ ಅಂದ್ರೆ, ತಮ್ಮ ಚಲನವಲನಗಳು ವಿರೋಧಿ ಪಾಳಯಕ್ಕೆ ಗೊತ್ತಾಗಬಾರದು ಎಂದು. ಇವರ ಕಾರ್ಯವೈಖರಿ ಎಷ್ಟೊಂದು ಗುಪ್ತ್ ಗುಪ್ತ್ ಅಂದರೆ ತಮ್ಮ ಎಡಗೈನಲ್ಲಿರುವ ರಹಸ್ಯವನ್ನು ಬಲಗೈಗೇ ತಿಳಿಸುವುದಿಲ್ಲ.

ಸಾದಸೀದಾ ಅಧಿಕಾರಿ. ಮೂಲತಃ ಇಂಜಿನಿಯರ್ ಆದರೂ ಕಾನೂನನ್ನು ಚೆನ್ನಾಗಿ ಅರಿದು ಕುಡಿದಿದ್ದಾರೆ. ಇವರು ಇದುವರೆಗೆ ಕೈ ಹಾಕಿರುವುದೆಲ್ಲ ಘಟಾನುಘಟಿಗಳ ಬುಡಕ್ಕೆ. ಇಂತಿಪ್ಪ ಲಕ್ಷ್ಮಿನಾರಾಯಣ ಹುಟ್ಟಿ ಬೆಳೆದಿದ್ದು ಕರ್ನೂಲು ಜಿಲ್ಲೆಯ ಶ್ರೀಶೈಲಂನಲ್ಲಿ.

ಇವರಪ್ಪ ಸರಕಾರಿ ಇಂಜಿನಿಯರ್. ಲಕ್ಷ್ಮಿನಾರಾಯಣರೂ ವಾರಂಗಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿಇ ಮಾಡಿದ್ದಾರೆ. ಬಿಇ ಮುಗಿಸುತ್ತಿದ್ದಂತೆ ಐಪಿಎಸ್ ಅಧಿಕಾರಿಯಾದರು.

ಮಹಾರಾಷ್ಟ್ರದ ನಾಂದೇಡ್ ನಲ್ಲಿ ಎಸ್ ಪಿ ಯಾಗಿ ಸಾಕಷ್ಟು ಹೆಸರು ಗಳಿಸಿದರು. ಅಲ್ಲಿಂದ ಮುಂದೆ ಮಹಾರಾಷ್ಟ್ರ ಎಟಿಎಸ್ ತಂಡ ಸೇರಿದರು. ಆದರೆ ಅದೆಲ್ಲ ಅವರಿಗೆ ರುಚಿಸಲಿಲ್ಲ. ಸೀದಾ ಸಿಬಿಐ ಬಾಗಿಲು ಬಡಿದರು. ಸಿಬಿಐ ಸಹ ಿವರಿಗೆ ತುಂಬು ತೋಳಿನ ಸ್ವಾಗತ ಕೋರಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+