ಲಕ್ಷ್ಮಿನಾರಾಯಣ ಹೈದರಾಬಾದಿಗೆ ವರ್ಗ; ಭ್ರಷ್ಟರಿಗೆ ದುಃಸ್ವಪ್ನ

ಮೊದಲು, ಐದು ವರ್ಷಕ್ಕೆ ಸ್ಥಳೀಯ ಸಿಬಿಐ ಸಾರಥ್ಯ ವಹಿಸಿಕೊಳ್ಳಿ ಎಂದಿದ್ದ ದೆಹಲಿ ಬಾಸ್ ಗಳು ನಂತರ ಲಕ್ಷ್ಮಿನಾರಾಯಣರ ಸಾರಥ್ಯವನ್ನು ಮತ್ತೆ ಮತ್ತೆ ವಿಸ್ತರಿಸಿದರು. ಈ ಮಧ್ಯೆ 2006ರಲ್ಲಿ ಪೊಲೀಸ್ ಪದಕವನ್ನು ಎದೆಗೇರಿಸಿಕೊಂಡರು.
ಇಂತಿಪ್ಪ ಲಕ್ಷ್ಮಿನಾರಾಯಣರಿಗೆ ಭ್ರಷ್ಟಾಚಾರ ಕಂಡರಾಗದು ಎಂಬುದನ್ನು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ. ಎನೇ ಒತ್ತಡವಿರಲಿ ಭ್ರಷ್ಟರನ್ನು ಹೆಡೆಮುರಿಗೆ ಕಟ್ಟಿದ ಬಳಿಕವೇ ದಣಿವಾರಿಸಿಕೊಳ್ಳುವ ಗುಣ ಇವರದು. ಲಕ್ಷ್ಮಿನಾರಾಯಣಗೆ ತಾವು ಓದಿದ ಶಾಲೆ, ಕಾಲೇಜು ಅಂದರೆ ಉತ್ಕಟ ಅಭಿಮಾನ.
ಜಗನ್ ಪ್ರಕರಣ ಕೈಗೆತ್ತಿಕೊಳ್ಳಿ ಎಂದು ದೆಹಲಿಯಿಂದ ಆದೇಶ ಬಂದಾಗ ಇವರು ವಾರಂಗಲ್ ನಲ್ಲಿ ಕಾಲೇಜಿನ ಹಳೆಯ ಸಹಪಾಠಿಗಳ ಜತೆ ಸುಮಧುರ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರು.
ನಾಲ್ಕೈದು ವರ್ಷಗಳಿಂದ ಅಕ್ರಮ ಗಣಿವೀರ ಜನಾ ರೆಡ್ಡಿಯ ಬೆನ್ನು ಬಿದ್ದಿದ್ದ ಲಕ್ಷ್ಮಿನಾರಾಯಣ ಇಂದು ಆತನನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸೆ. 19ರವರೆಗೂ ಪಾಪ ಪಾಂಡು ರೆಡ್ಡಿ, ಲಕ್ಷ್ಮಿನಾರಾಯಣರ ಕಪಿಮುಷ್ಠಿಯಲ್ಲಿರಬೇಕಾಗಿದೆ. ಪಾಪ, ಏನೆಲ್ಲ ಕಾದಿದೆಯೋ ರೆಡ್ಡಿಗೆ.












Click it and Unblock the Notifications