ಸಿಬಿಐ ಲಕ್ಷ್ಮೀನಾರಾಯಣರ ಆರೋಪಪಟ್ಟಿ: ರೆಡ್ಡಿಗೆ ಕಡುಕಷ್ಟ

ಜನಾರ್ದನ ರೆಡ್ಡಿ, ಶ್ರೀನಿವಾಸರೆಡ್ಡಿ, ಆಂಧ್ರದ ರಾಯದುರ್ಗ ಶಾಸಕ ರಾಮಚಂದ್ರರೆಡ್ಡಿ, ಶಾಸಕ ಜಿ. ಸೋಮಶೇಖರ್ ರೆಡ್ಡಿ, ಮಾಜಿ ಸಚಿವರಾದ ಕರುಣಾಕರ ರೆಡ್ಡಿ, ಶ್ರೀರಾಮುಲು, ಸಂಸದ ಸಣ್ಣ ಪಕೀರಪ್ಪ ಹಾಗೂ ಶಾಸಕ ಜಿ.ನಾಗೇಂದ್ರ ದೇವಸ್ಥಾನ ಸ್ಫೋಟದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಬಳ್ಳಾರಿ ಗ್ರಾಮೀಣ ಪೊಲೀಸರು ಸುಗ್ಗಲಮ್ಮ ದೇವಸ್ಥಾನ ನೆಲಸಮ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 100 ಪುಟಗಳ ಚಾರ್ಚ್‌ಶೀಟ್ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 52 ಮಂದಿ ಸಾಕ್ಷಿದಾರರ ಮಾಹಿತಿಯ ಜತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಡೂರು ನ್ಯಾಯಾಲಯ ಹೊರಡಿಸಿದ್ದ ವಾರೆಂಟ್, ನ್ಯಾಯಾಧೀಶರ ಹೇಳಿಕೆ, ಸ್ಥಳೀಯ ಪ್ರಾಮಾಣಿಕ ಅಧಿಕಾರಿಗಳ ಅಭಿಪ್ರಾಯ, ಸುಗ್ಗಲಮ್ಮ ದೇವಸ್ಥಾನ ಹಾಗೂ ಗಡಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗೆಜೆಟ್‌ನಲ್ಲಿ ಹೊರಡಿಸಿದ್ದ ಅಧಿಸೂಚನೆ, ಐತಿಹಾಸಿಕ ದಾಖಲೆಗಳು ಹಾಗೂ ನಕ್ಷೆಗಳನ್ನು ಸಿಬಿಐ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಸಿಬಿಐ ಜಂಟಿ ನಿರ್ದೇಶಕ ಹಾಗೂ ಹಗರಣದ ತನಿಖೆಯ ಉಸ್ತುವಾರಿ ವಹಿಸಿರುವ ವಿ.ವಿ. ಲಕ್ಷ್ಮೀನಾರಾಯಣ ಅವರು ಬಳ್ಳಾರಿ ಹಾಗೂ ಸಂಡೂರಿಗೆ ಹಲವು ಬಾರಿ ಭೇಟಿ ನೀಡಿ ಸ್ಥಳೀಯ ಪೊಲೀಸರು ಸಂಗ್ರಹಿಸಿದ ಮಾಹಿತಿ ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಚ್‌ಶೀಟ್‌ನ್ನು ಪರಿಶೀಲಿಸಿ, ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಹೋಗಿದ್ದರು.
ಈ ಪ್ರಕರಣದಲ್ಲಿ ಸಿಬಿಐ ಯಶಸ್ಸುಗಳಿಸಲು ಸ್ಥಳೀಯ ಪೊಲೀಸರು ಸುಗ್ಗಲಮ್ಮ ದೇವಸ್ಥಾನ ನೆಲಸಮ ಪ್ರಕರಣದಲ್ಲಿ ಸಲ್ಲಿಸಿದ್ದ ದೋಷರೋಪ ಪಟ್ಟಿಯೇ ಪ್ರಮುಖ ಕಾರಣವಾಗಿದ್ದು, ಹೈದರಾಬಾದ್ ವಿಶೇಷ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯೂ ಈ ದೋಷರೋಪ ಪಟ್ಟಿಯನ್ನೇ ಅವಲಂಬಿಸಿದೆ.












Click it and Unblock the Notifications