ಬೆಂಗಳೂರು ಕೋರ್ಟ್ಗೆ ತಮಿಳು ಸಿಎಂ ಜಯಲಲಿತಾ ಬರ್ತಾರಾ?

Will Jayalalitha appear in Court
ಬೆಂಗಳೂರು, ಸೆ.12: ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಆರೋಪಿ ತಮಿಳುನಾಡು ಸಿಎಂ ಜೆ ಜಯಲಲಿತಾ ಅವರು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಬರುತ್ತಾರಾ? ಇಲ್ಲವಾ? ಕುತೂಹಲದ ಪ್ರಶ್ನೆಯಾಗಿದೆ. ಜಯಲಲಿತಾ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಅಕ್ಟೋಬರ್ 20 ರಂದು ಜಯಲಲಿತಾ ಅವರಿಗೆ ಹೊಟ್ಟೆ, ತಲೆ, ಕೈ ಕಾಲು ಸೇರಿದಂತೆ ಯಾವುದೇ ಅವಯಮಗಳು ಡ್ಯಾಮೇಜ್ ಆಗದಿದ್ದರೆ, ಸಡನ್ ಆಗಿ ಅನಾರೋಗ್ಯ ಕಾಡದಿದ್ದರೆ ಬೆಂಗಳೂರಿನ ಸಿವಿಲ್ ಕೋರ್ಟ್ ಆವರಣಕ್ಕೆ ಕಾಲಿಡಲೇಬೇಕಾಗಿದೆ. ಮಾಜಿ ಸಿಎಂ ಗಳಾದ ಯಡಿಯೂರಪ್ಪ, ಎಚ್ಡಿಕೆ ದಂಪತಿ ನಂತರ ಜಯಲಲಿತಾ ಅಗಮನದಿಂದ ಬೆಂಗಳೂರಿನ ಕೋರ್ಟ್ ಆವರಣ ಮತ್ತೊಮ್ಮೆ ಸುದ್ದಿಗೆ ಬರಲಿದೆ.

ಜಯಲಲಿತಾ ಅವರು ಹಾಜರಾಗುವ ಸಮಯದಲ್ಲಿ ಅವರಿಗೆ ಬಿಗಿ ಭದ್ರತೆಯನ್ನು ಒದಗಿಸಲು ಬೆಂಗಳೂರು ನಗರ ಪೊಲೀಸ್ ಸಿದ್ಧವಿದೆ ಎಂದು ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.

ಜಯಾ ಕುಂಟು ನೆಪ: ನಾನು ಮುಖ್ಯಮಂತ್ರಿಯಾಗಿದ್ದು, ವಿಶೇಷ ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಗೆ ವಿನಾಯತಿ ನೀಡಿ ಎಂದು ಜಯಲಲಿತಾ ಸಿಆರ್ ಪಿಸಿ 313 ರ ಅಡಿಯಲ್ಲಿ ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ದಲವೀರ್ ಭಂಡಾರಿ ಮತ್ತು ದೀಪಕ್ ವರ್ಮಾ ಮನವಿಯನ್ನು ತಿರಸ್ಕರಿಸಿ, ಖುದ್ದು ಹಾಜರಾಗುವಂತೆ ಸೂಚಿಸಿದ್ದಾರೆ. ಭದ್ರತೆ ಒದಗಿಸುವಂತೆ ಕೂಡಾ ಆದೇಶ ನೀಡಿದ್ದಾರೆ.

ಯಾವುದಿದು ಕೇಸ್?: 1991-96 ರ ಅವಧಿಯಲ್ಲಿ ಅಕ್ರಮವಾಗಿ 66 ಕೋಟಿ ರೂ. ಗಳಿಸಿದ ಆರೋಪವನ್ನು ಜಯಲಲಿತಾ ಅವರ ಮೇಲೆ ಹೊರೆಸಲಾಗಿದೆ. ವಿಚಾರಣೆಗೆ ಈವರೆಗೂ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವ ಜಯಲಲಿತಾ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಕೂಡಾ ಒಮ್ಮೆ ಕೋರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+