ಉಗ್ರರ ಇಮೇಲ್ ಆಟ: ಪೊಲೀಸರಿಗೆ ಸಂಕಷ್ಟ

Delhi Hicourt Blast
ನವದೆಹಲಿ, ಸೆ.10: ದೆಹಲಿ ಹೈ ಕೋರ್ಟ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ನಿಖರ ಸಾಕ್ಷ್ಯ ದೊರೆತಿಲ್ಲ. ಆದರೆ ಇದುವರೆಗೂ ಉಗ್ರರಿಂದ ನಾಲ್ಕು ಇಮೇಲ್ ಗಳು ಬಂದಿದ್ದು, ಇವುಗಳ ಸತ್ಯಾಸತ್ಯತೆಯೇ ಪೊಲೀಸರಿಗೆ ಪ್ರಶ್ನಾರ್ಹವಾಗಿದೆ.

ಬಾಂಬ್ ಸ್ಪೋಟದ ಕೃತ್ಯ ತನ್ನದೆಂದು ಮೊದಲು ಹುಜಿ ಸಂಘಟನೆ ಹೊಣೆಹೊತ್ತಿತ್ತು. ನಂತರ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಿಂದ ಇನ್ನೊಂದು ಇಮೇಲ್ ಬಂದಿತ್ತು.

ಇದೀಗ ಸ್ಫೋಟಕ್ಕೆ ಸಂಬಂಧಿಸಿದಂತೆ ಐವಿಲ್ ಕಿಲ್ ಡಾಟ್ ಇಂಡಿಯನ್ಸ್ @ ಯಾಹೂ.ಕಾಮ್ ಎಂಬ ಐಡಿಯಲ್ಲಿ ಸಂದೇಶ ಕಳುಹಿಸಲಾಗಿದ್ದು, ಅಹ್ಮದಾಬಾದ್ ಅನ್ನು ಸ್ಫೋಟದ ಗುರಿಯಾಗಿಸಿರುವುದಾಗಿ ತಿಳಿಸಿದೆ.

ನಂತರ ಶುಕ್ರವಾರ ರಾತ್ರಿಯೂ ಚೊಟು ಮಿನಾನಿ ಎಂಬ ಹೆಸರಿನಲ್ಲಿ ಮುಂದಿನ ಸ್ಫೋಟದ ಗುರಿ ಅಹ್ಮದಾಬಾದ್ ಆಗಿದೆ ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.

ಉಗ್ರರ ಕಡೆಯಿಂದ ಸಾಲುಸಾಲಾಗಿ ಬರುತ್ತಿರುವ ಇಮೇಲ್ ಗಳು ಪ್ರಕರಣದ ದಾರಿತಪ್ಪಿಸುವುದೇ? ಅಥವಾ ಆರೋಪಿಗಳನ್ನು ಸುಲಭವಾಗಿ ಬಲೆಗೆ ಕೆಡವಲು ನೆರವಾಗುತ್ತೋ ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+