ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ತಾಂಡ ದೇವಪ್ರಶ್ನೆ ನಡೆಸಿದ್ದೇಕೆ?: ಕೋರ್ಟ್ ಕೆಂಡಾಮಂಡಲ

By Srinath
|
Google Oneindia Kannada News

padmanabha-b-vault-sc-castigates-marthanda-verma
ತಿರುವಂತನಪುರ, ಸೆ.02: ಅನಂತ ಪದ್ಮನಾಭ ದೇಗುಲದ ನೆಲಮಾಳಿಗೆಯ 'ಬಿ" ಉಗ್ರಾಣ ದ್ವಾರ ತೆರೆಯಬೇಕೆ, ಬೇಡವೇ ಎಂಬುದರ ಬಗ್ಗೆ ಇಂದು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ರಾಜಮನೆತನದ ದೇವಪ್ರಶ್ನೆ ಅಥವಾ ಅಷ್ಟಮಂಗಲ ಪ್ರಶ್ನೆ ಬಗ್ಗೆ ಕಿಡಿಕಾರಿದೆ.

ಎಲ್ಲವೂ ಅಷ್ಟಮಂಗಲ ಪ್ರಶ್ನೆ ಮೂಲಕವೇ ಇತ್ಯರ್ಥವಾಗುವ ಹಾಗಿದ್ದರೆ ಕೋರ್ಟ್ ಇರುವುದಾದರೂ ಏತಕ್ಕೆ ಎಂದು ಮಾರ್ತಾಂಡ ವರ್ಮಾರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಅಷ್ಟಕ್ಕೂ ಈ ವಿಚಾರದಲ್ಲಿ ಯಾರೂ ಮೂಗುತೂರಿಸುವಂತಿಲ್ಲ. ಕೋರ್ಟ್ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದೆ. ಅಲ್ಲಿಯವರೆಗೂ ಕಾಯಿರಿ ಎಂದು ಹೇಳಿದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಿದೆ.

ರಾಜಮನೆತನದ ರಾಜಾ ಮಾರ್ತಾಂಡ ವರ್ಮಾ ಕಳೆದ ತಿಂಗಳು ಸಂಪ್ರದಾಯಬದ್ಧವಾಗಿ ಅಷ್ಟಮಂಗಲ ಪ್ರಶ್ನೆ ಕೇಳಿದ್ದರು. ಅಷ್ಟಮಂಗಲ ಪ್ರಶ್ನೆಯ ಮೂಲಕ 'ಬಿ" ಉಗ್ರಾಣ ತೆರೆಯುವುದು ಅಪಾಯಕಾರಿ, ರಾಷ್ಟ್ರಕ್ಕೇ ವಿಪತ್ತು ತರಲಿದೆ ಎಂದೆಲ್ಲ ಉತ್ತರಗಳು ಬಂದಿದ್ದವು ಎನ್ನಲಾಗಿದೆ.

ಈಗಾಗಲೇ ದೊರೆತಿರುವ ಕೋಟ್ಯಂತರ ಅನಂತ ಸಂಪತ್ತು ಮತ್ತು ಬಿ ಉಗ್ರಾಣ ತೆರೆಯುವ ವಿಷಯವಾಗಿ ಕೋರ್ಟ್ ನೇತೃತ್ವದಲ್ಲಿ ಉನ್ನತ ಸಮಿತಿ ರಚನೆಯಾಗಿದೆ. ಸಮಂಜಸ ಪರಿಹಾರ ಸೂಚಿಸುವುದು ಸಮಿತಿಯ ಆದ್ಯ ಕರ್ತವ್ಯ. ಅಂಥಹುದರಲ್ಲಿ ಇದೇನಿದು ಅಷ್ಟಮಂಗಲ ಪ್ರಶ್ನೆ ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

English summary
Supreme Court while postponing the decision on the opening of B Vault in the Temple to Sept 12 has come down heavily on the conduct of Ashtamangala Devaprasnam and inturn Raja Marthanda Verma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X