ನಮ್ಮ ಮೆಟ್ರೋ ಟ್ರಾವೆಲ್ ಕಾರ್ಡ್ ಬಿಡುಗಡೆ

ತಾವೇ ಮೊದಲಿಗರಾಗಿ ಮೆಟ್ರೋ ಸಂಚಾರಿ ಕಾರ್ಡನ್ನು 100 ರು. ಕೊಟ್ಟು ಖರೀದಿಸಿದರು. ಜೊತೆಗೆ, ಸಾರ್ವಜನಿಕರು ಆನ್ ಲೈನ್ ಮೂಲಕ ಮೆಟ್ರೋ ಕಾರ್ಡನ್ನು ಖರೀದಿಸಲು ಅನುಕೂಲವಾಗುವಂತೆ ಬಿಎಂಆರ್ಸಿ ವೆಬ್ ಸೈಟನ್ನು ಉದ್ಘಾಟಿಸಿದರು. ವೆಬ್ ಸೈಟ್ : www.bmrc.co.in
"ಸೆ.15ರಂದು ಆರಂಭವಾಗುವುದೆಂದು ಅಂದುಕೊಂಡಿದ್ದೆವು. ಕಮಿಷನರ್ ಆಫ್ ರೇಲ್ವೆ ಸೇಫ್ಟಿ (ಸಿಆರ್ಆರ್) ಸೆ.6ರಿಂದ 9ರವರೆಗೆ ಮೆಟ್ರೋ ವ್ಯವಸ್ಥೆಯ ಅಧ್ಯಯನ ನಡೆಸಿ ಸುರಕ್ಷತಾ ಪ್ರಮಾಣಪತ್ರ ನೀಡಲಿದೆ. ಪ್ರಮಾಣಪತ್ರ ಪಡೆದ ನಂತರ ಸೆ.25ರೊಳಗೆ ಪ್ರಧಾನಿ ಮನಮೋಹನ ಸಿಂಗ್ ಅವರು ಲೋಕಾರ್ಪಣೆ ಮಾಡಲಿದ್ದಾರೆ" ಎಂದು ಸದಾನಂದ ಗೌಡ ಈ ಸಂದರ್ಭದಲ್ಲಿ ಹೇಳಿದರು.
ನಮ್ಮ ಮೆಟ್ರೋ ಸಂಚಾರ ಕಾರ್ಡ್‌ನ್ನು ಮೆಟ್ರೊ ನಿಲ್ದಾಣಗಳಲ್ಲಿ ಹಾಗೂ ಆನ್‌ಲೈನ್ ಮುಖಾಂತರ ಖರೀದಿಸುವ ಹಾಗೂ ರೀಚಾರ್ಜ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಆನ್‌ಲೈನ್ ಮೂಲಕ ಖರೀದಿಸುವ ಕಾರ್ಡ್‌ನ್ನು ಏಳು ದಿನದೊಳಗಗಾಗಿ ಖರೀದಿದಾರರ ಮನೆಗೆ ತಲುಪಿಸಲಾಗುವುದು. ಇದಕ್ಕಾಗಿ 20 ರು.ಗಳ ಶುಲ್ಕವನ್ನು ವಿಧಿಸಲಾಗುವುದು.
ಮೆಟ್ರೋ ಸಂಚಾರ ಕಾರ್ಡ್‌ನ್ನು ಆನ್‌ಲೈನ್ ಮುಖಾಂತರ ಖರೀದಿಸಿದಲ್ಲಿ ಒಂದು ಪಕ್ಷ ಕಾರ್ಡ್ ಕಳೆದುಹೋದಲ್ಲಿ ಕಾರ್ಡ್‌ನ್ನು ಸ್ಥಗಿತಗೊಳಿಸುವ ಸೌಲಭ್ಯವಿದೆ. ಹೆಚ್ಚಿನ ಹಣ ನೀಡಿ ಸಂಚಾರ ಕಾರ್ಡ್‌ನ ಅಂಕಿಗಳನ್ನು ಆಯ್ಕೆಮಾಡಿಕೊಳ್ಳಬಹುದು. 3 ಅಥವಾ 4 ಅಂಕಿಗಳಿಗೆ ರು.50, 5 ಅಥವಾ 6 ಅಂಕಿಗಳಿಗೆ ರು.100, 7 ಅಂಕಿಗಳಿಗೆ ರು.150 ನೀಡಿ ಆಯ್ಕೆ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಮೆಟ್ರೊ ಟಿಕೆಟ್ ಅನ್ನು ಖರೀದಿಸಿ ಮೆಟ್ರೊ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡಬಹುದು.
ಟಿಕೆಟ್ ಬೆಲೆ ನಿಗದಿ : ಬೈಯಪ್ಪನಹಳ್ಳಿಯಿಂದ ಮಹಾತ್ಮ ಗಾಂಧಿ ರಸ್ತೆವರೆಗೆ ರು.15, ಟ್ರಿನಿಟಿ ವೃತ್ತದವರೆಗೆ ರು.14, ಹಲಸೂರು, ಇಂದಿರಾನಗರದವರೆಗೆ ರು.12 ಮತ್ತು ವಿವೇಕಾನಂದ ವೃತ್ತದವರೆಗೆ ರು.10. ಈ ಕಾರ್ಡುಗಳನ್ನು ಟಿಕೆಟ್ ಕೌಂಟರುಗಳಲ್ಲಿ, ನೆಟ್ ಬ್ಯಾಂಕಿಂಗ್ ಮುಖಾಂತರ ರಿಚಾರ್ಜ್ ಮಾಡಿಸಬಹುದಾಗಿದೆ.
ಈ ಸಂದರ್ಭದಲ್ಲಿ ಗೃಹ ಮತ್ತು ಸಾರಿಗೆ ಸಚಿವ ಆರ್ ಅಶೋಕ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್, ಬೆಂಗಳೂರು ಮೇಯರ್ ಶಾರದಮ್ಮ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಸಿಎಂ ಉದಾಸಿ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications