ಲೋಕ ಪಾಲ್ ಮಸೂದೆ : 7 ಪ್ರಮುಖ ಅಗತ್ಯತೆಗಳು

ದೇಶದ ಎಲ್ಲೆಡೆಯಿಂದ ಲಕ್ಷಾಂತರ ಜನ ಸಮೂಹ ರಾಜಕೀಯ ಬಣ್ಣವಿಲ್ಲದ, ಅಹಿಂಸಾತ್ಮಕ ಹೋರಾಟಕ್ಕೆ ಇಳಿದಿರುವುದು ಮೆಚ್ಚುಗೆಯ ಸಂಗತಿ. ಭಾರತ ಸ್ವಾತಂತ್ರ್ಯದ ನಂತರ ಪ್ರಥಮ ಬಾರಿಗೆ ಪ್ರಜಾಪ್ರಭುತ್ವದ ಶಕ್ತಿ ಸಾಮರ್ಥ್ಯಕ್ಕೆ ನೈಜ ಸಾಕ್ಷಿಯಾಗಿ ಈ ಹೋರಾಟ ಕಾಣಿಸುತ್ತದೆ.
ಸಂಸತ್ತಿನಲ್ಲಿ ಜನ ಪ್ರತಿನಿಧಿಯಾಗಿ, ಪ್ರಸಕ್ತ ವಿದ್ಯಮಾನದ ಬಗ್ಗೆ ನಾಗರಿಕ ಸಮಾಜದಿಂದ ದೊರಕುವ ಪರ ವಿರೋಧ ಚರ್ಚೆಗಳನ್ನು ಆಲಿಸಿ ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸುವುದು ಸಂಸದನ ಕರ್ತವ್ಯವಾಗಿದೆ.
ಅಸಮರ್ಥ ಸರ್ಕಾರ ಅಥವಾ ಅರಾಜಕತೆಯ ಪರಿಣಾಮವೇ ಭ್ರಷ್ಟಾಚಾರ ಎಂದು ಸ್ಪಷ್ಟವಾಗಿ ಹೇಳಬಹುದು. 'ಮಾನವ ಹಕ್ಕುಗಳ ಉಲ್ಲಂಘನೆ ಪರಮಾವಧಿ ಎಂದರೆ ಅದು ಭ್ರಷ್ಟಾಚಾರ' ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಶಕ್ತ ಸರ್ಕಾರದ ಜೊತೆ ಲಂಪಟತನ ಸೇರಿ, ಅಭಿವೃದ್ಧಿ ಯೋಜನೆ ಮೇಲೆ ಯೋಜನೆ ಘೋಷಿಸಿ, ಗೊತ್ತು ಗುರಿಯಿಲ್ಲದಂತೆ ಆಡಳಿತ ನಡೆಸುವುದರ ಪರಿಣಾಮವಾಗಿ ಭ್ರಷ್ಟಾಚಾರ ಅಳಿಯದೆ ಉಳಿದಿದೆ.
ಸರ್ಕಾರ ಕಾರ್ಯ ವೈಖರಿಯಲ್ಲಿ ಬದಲಾವಣೆಯಾಗಬೇಕು. ಸಶಕ್ತ ನಿಯಮಗಳ ಮೂಲಕ ಜವಾಬ್ದಾರಿಯುತವಾಗಿ ಸಾರ್ವಜನಿಕರ ಹಣ ಹಾಗೂ ಸೊತ್ತುಗಳಿಗೆ ಗೌರವಯುತವಾದ ಸ್ಥಾನ ನೀಡುವ ಸಂಸ್ಕೃತಿ ಬರಬೇಕಿದೆ.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪ ಹಾಗೂ ಶೋಷಣೆಗೆ ತುತ್ತಾಗಿದೆ. ಈ ಸಂಸ್ಥೆಗಳನ್ನು ಪುನರ್ ರೂಪಿಸಿ, ವಿಶ್ವಸಾರ್ಹತೆಯನ್ನು ಪುನರ್ ಸ್ಥಾಪಿಸಬೇಕಿದೆ. ದೇಶದಲ್ಲಿ ನ್ಯಾಯಾಂಗ ಹಾಗೂ ಸಿಎಜಿ ಹೆಮ್ಮೆಯ ಅಂಗವಾಗಿರುವಂತೆ ಉಳಿದ ಸಂಸ್ಥೆಗಳನ್ನು ಇದೇ ನಿಟ್ಟಿನಲ್ಲಿ ಸಾಗಬೇಕು, ಸ್ವತಂತ್ರವಾಗಿ ಹಾಗೂ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು.
'Building public institutions is like slow boring of hard boards' ಎನ್ನುವ ವೆಬೆರ್ ನ ಮಾತುಗಳು ಇಲ್ಲಿ ಸ್ಮರಣೀಯ.
ಲೋಕಪಾಲದಂಥ ಹೊಸ ಸಂಸ್ಥೆ ಸ್ಥಾಪನೆಗೂ ಮುನ್ನ ಜನರಲ್ಲಿ ಸಂಸ್ಥೆಯ ಬಗೆಗಿರುವ ವಿಶ್ವಾಸಾರ್ಹತೆಯನ್ನು ಹೆಚ್ಚಿಸಬೇಕಿದೆ.
ಲೋಕಪಾಲ ಹಾಗೂ ಜನ ಲೋಕಪಾಲ ನಡುವೆ ಅನಾರೋಗ್ಯಕರ ಹಾಗೂ ದಿಕ್ಕುತಪ್ಪಿಸುವ ಚರ್ಚೆಗಳು ನಡೆದಿವೆ, ಅದರ ಬದಲು ನಮಗೆ ನಿಜವಾಗಿಯೂ ಅಗತ್ಯವಾಗಿರುವ ಅಂಶಗಳ ಬಗ್ಗೆ ಪ್ರಶ್ನಿಸೋಣ.
ಲೋಕಪಾಲ ಸಂಸ್ಥೆ ವಿಶ್ವಾಸರ್ಹತೆಯ ಅವಶ್ಯಕತೆಗಳು ಇಂತಿದೆ:
1. ಲೋಕಪಾಲ ಸ್ವತಂತ್ರವಾಗಿರಬೇಕು.
2. ಲೋಕಾಪಾಲಕ್ಕೆ ಸೂಕ್ತವಾದ ತನಿಖಾ ಸಾಮರ್ಥ್ಯ ನೀಡಬೇಕು.
3. ಲೋಕಾಯುಕ್ತಕ್ಕೆ ಸಮರ್ಪಕವಾದ ಸಂಪನ್ಮೂಲಗಳಿರಬೇಕು.
4. ಲೋಕಾಪಾಲ ಗೌಪ್ಯತೆಗೆ ಒಳಪಟ್ಟಿರವುದನ್ನು ಖಚಿತಪಡಿಸಬೇಕು.
5. ಲೋಕಾಪಾಲ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ನೆರವು ಪಡೆಯುವಂತಿರಬೇಕು.
6. ಲೋಕಾಪಾಲ ಸಂಸ್ಥೆಯು ವೃತ್ತಿಪರವಾಗಿರಬೇಕು.
7. ಲೋಕಾಪಾಲ ಸಂಸ್ಥೆ ಸಾಂವಿಧಾನಿಕ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸಬೇಕು.
ನಾವು ಈ ಏಳು ಅಂಶಗಳನ್ನು ಅಳವಡಿಸಿದ್ದೇ ಆದಲ್ಲಿ- ಜನ ಲೋಕಪಾಲ ವಿಧೇಯಕವು ಸಶಕ್ತ ಸಂಸ್ಥೆ ಎನಿಸುತ್ತದೆ. ಭ್ರಷ್ಟಾಚಾರವನ್ನು ತಡೆಗಟ್ಟಲು ಪ್ರಬಲ ಕಾನೂನು ಪ್ರಮುಖ ಅಸ್ತ್ರವಾಗುತ್ತದೆ. ಸಾಂವಿಧಾನಿಕ ಚೌಕಟ್ಟಿಗೆ ಸಂಬಂಧಿಸಿದಂತೆ ಜನ ಲೋಕಪಾಲ ವಿಧೇಯಕರ ಕೆಲ ಭಾಗಗಳನ್ನು ಇನ್ನೂ ಪರೀಕ್ಷಿಸಬೇಕಿರುವುದನ್ನು ನಾವು ಮರೆಯುವಂತಿಲ್ಲ.
ನಮ್ಮ ಪ್ರತಿನಿಧಿಗಳ ಆಶೋತ್ತರಗಳಿಗೆ ಪ್ರತಿಸ್ಪಂದಿಸುವ ಅಭೂತಪೂರ್ವ ಅವಕಾಶ ಸಂಸತ್ತಿನಲ್ಲಿ ಒದಗಿಬಂದಿದೆ.
ಭಾರತದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಬಗ್ಗೆ ಸಂಸತ್ತಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಆ.25, 2011ರಂದು ರಾಜೀವ್ ಚಂದ್ರಶೇಖರ್ ಅವರು ಮಾಡಿದ ಭಾಷಣ ಸಾರಾಂಶ.












Click it and Unblock the Notifications