Get Updates
Get notified of breaking news, exclusive insights, and must-see stories!

ನಮ್ಮ ಪ್ರಜಾಪ್ರಭುತ್ವ ಜನರಿಗಾಗಿ, ಸಂಸತ್ತಿಗಾಗಿ ಅಲ್ಲ

MP Rajeev Chandrshekar
ಅಣ್ಣಾ ಹಜಾರೆ ನೇತೃತ್ವದ ಜಂತರ್ ಮಂತರ್ ನಲ್ಲಿ ಆರಂಭವಾದ ಚಳವಳಿ ಸರ್ಕಾರ ಹಾಗೂ ಭ್ರಷ್ಟಾಚಾರದ ವಿರುದ್ಧ ಅಭೂತಪೂರ್ವ ಸ್ವರೂಪದಲ್ಲಿ ದೇಶದೆಲ್ಲೆಡೆ ಪ್ರತಿಬಿಂಬಿತವಾಗಿದೆ. ಭ್ರಷ್ಟಾಚಾರ ಹಾಗೂ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಡಲು ಜನರ ಮನಸ್ಸುಗಳು ಒಂದಾಗಿದೆ.

ದೆಹಲಿ ಅನೇಕ ಪ್ರಭಾವಿ ಮಾಧ್ಯಮಗಳು ಈ ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ಸಣ್ಣ ಚಳವಳಿ ಎಂದರು ನಂತರ, ಮಧ್ಯಮ ವರ್ಗದ ಜನರ ಹೋರಾಟ ಎಂದು ಬೇರೆ ಸ್ವರೂಪ ನೀಡಲು ಯತ್ನಿಸಿದರು. ಇದು ಕೇವಲ ಜನರ ಹತಾಶೆ, ಕೋಪದ ಪ್ರತೀಕ ಎಂದೇ ದೆಹಲಿ ವ್ಯವಸ್ಥೆ ನಂಬಿತ್ತು.

ಭ್ರಷ್ಟಾಚಾರ ನಿರ್ಮೂಲನಾ ಕಾಯಿದೆಯಾಗಿ ಜನ ಲೋಕಪಾಲ ವಿಧೇಯಕ ಮಂಡನೆಯ ಸಂದರ್ಭ ಒದಗಿ ಬಂದಿರುವ ವೇಳೆಯಲ್ಲಿ ಕೇವಲ ಪ್ರಮುಖಾಂಶಗಳನ್ನು ಪುನರ್ ಮನನ ಮಾಡುವುದು ಅಗತ್ಯ. ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ಜನತೆ ಸಾಕಷ್ಟು ಬೇಸತ್ತಿದ್ದಾರೆ, ಹತಾಶೆಗೆ ಒಳಗಾಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಬೇಕು.

ಎರಡನೆಯದಾಗಿ-ಜನರ ನಾಡಿ ಮಿಡಿತ, ಸದ್ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸರ್ಕಾರಗಳು ಹಾಗೂ ಅವರನ್ನು ಬೆಂಬಲಿಸುವ ಪ್ರಭಾವಿ ಮಾಧ್ಯಮ ಸಂಸ್ಥೆಗಳು ಸಂಪೂರ್ಣ ವಿಫಲವಾಗಿದೆ.

ಕೆಲವು ದಿನಗಳ ಹಿಂದೆ ಆಡಳಿತಾತ್ಮಕವ್ವಾಗಿ ದೆಹಲಿ ಹಾಗೂ ಭಾರತದ ಇತರೆ ಪ್ರದೇಶಗಳ ನಡುವೆ ಉಂಟಾಗುತ್ತಿರುವ ಅಂತರದ ಬಗ್ಗೆ ತುಂಬಾ ವ್ಯಥೆಯಿಂದ ನಾನು ಲೇಖನ ಬರೆದಿದ್ದೆ. ದೆಹಲಿ ಆಡಳಿತಕ್ಕೆ ಇಂಬು ನೀಡುವ ಮಾಧ್ಯಮ ಸಂಸ್ಥೆಯ ಸಂಪಾದಕರು ಮೊದಲಿಗೆ ಅಣ್ಣಾ ಹಜಾರೆ ಚಳವಳಿಯನ್ನು 'ಮಧ್ಯಮ ವರ್ಗೀಯ/ಉತ್ತಮರ ಹೋರಾಟ' ಎಂದು ಬಿಂಬಿಸಿದರು( ಇವರಿಗೆ ಹೋರಾಟ ಮಾಡುವ ಅರ್ಹತೆ ಇಲ್ಲ ಎಂಬಂತೆ) ಅರಿವಿಲ್ಲದ(ಸಂವಿಧಾನ ಕಾನೂನು ಹಾಗೂ ಕ್ರಿಮಿನಲ್ ಕಾನೂನು ಬಗ್ಗೆ) ಹಾಗೂ ಸದಾ ಹುಸಿನಗೆ ಬೀರುವ ಸಚಿವರು ಚಳಿವಳಿ ನಿರತ ನಾಯಕರಿಗೆ ಕಳಂಕದ ಆರೋಪ ಮಾಡತೊಡಗಿದರು.

ನಂತರ ಅಣ್ಣಾ ಹಜಾರೆ ಹಾಗೂ ತಂಡವನ್ನು ಬಂಧಿಸುವ ಘಾತುಕತನ ತೋರಿದರು.

ಯುಎಸ್ ಎ,ಆರೆಸ್ಸೆಸ್, ವಿದೇಶಿ ಬೆಂಬಲದ ನೆರವಿನ ನಿಗೂಢತೆ ಬಗ್ಗೆ ಸ್ಪಷ್ಟವಾದ ವಾದ ಮಂಡನೆ ಮಾಡಲಾಗಲಿಲ್ಲ.(ಲಕ್ಷಾಂತರ ಭಾರತೀಯರು ವಿದೇಶಿ ಶತ್ರುಗಳ ಬೆಂಬಲಿತ ಸೇನೆಯ ಕ್ರಾಂತಿಗೆ ಸೇರಿದಂತೆ ಸಂಚು ರೂಪಿಸಿದವರ ವಾದವಿತ್ತು)

ಇಷ್ಟೇ ಅಲ್ಲದೆ ಚಳುವಳಿಯನ್ನು ತಾಲಿಬಾನ್ ಗೆ ಹೋಲಿಸಿದ ಅರುಂಧತ್ ರಾಯ್, ತಂಪು ಹವೆ ಹೋರಾಟಗಾರರು ಎಂದ ಟೆಕ್ ಗುರು ಸೇರಿದಂತೆ ಹಲವಾರು ಸಂದರ್ಭದ ಲಾಭ ಪಡೆದು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಯಾವುದೇ ವಿಧೇಯಕದ ಪ್ರತಿ ಇಲ್ಲದಿದ್ದರೂ ತಮ್ಮ ಮೂಗಿನ ನೇರಕ್ಕೆ ವಿಧೇಯಕದ ಬಗ್ಗೆ ಅಭಿಪ್ರಾಯ ಮಂಡಿಸತೊಡಗಿದರು.

ಅಥವಾ ಜನ ಲೋಕಪಾಲ ಅಲ್ಪಸಂಖ್ಯಾತರ ವಿರೋಧಿ ಎಂದ ರಾಮ್ ವಿಲಾಸ್ ಪಾಸ್ವಾನ್ ವಿರುದ್ಧ ಜೆಡಿಯು ಸಂಸದ ಅಲಿ ಅನ್ವರ್ ತಿರುಗಿ ಬಿದ್ದಿದ್ದು ಜಾತ್ಯಾತೀಯತೆಯ ಶ್ರೇಷ್ಠ ಉದಾಹರಣೆಯಾಗಿದೆ.

ಜನ ಬೆಂಬಲ ದೊರೆತು 2 ವರ್ಷ ಪೂರೈಸಿದ ಸರ್ಕಾರ ಕೂಡಾ ರಾಜಕೀಯ ಪಕ್ಷವಾಗಿ ಸಂಧಾನ ನಡೆಸುವಲ್ಲಿ ವಿಫಲವಾಯಿತು, ಕಳೆದ 48 ಗಂಟೆಗಳಲ್ಲಿ ಅಣ್ಣಾ ಅವರ ಆರೋಗ್ಯ ಹದಗೆಟ್ಟ ಸುದ್ದಿ ಬಂದ ಮೇಲೆ ಪ್ರಧಾನಿ ಅವರು ಸಂಸತ್ತಿನಲ್ಲಿ ಅಣ್ಣಾಜಿ ಹಾಗೂ ಅವರ ಆದರ್ಶದ ಗುಣಗಾನ ಮಾಡತೊಡಗಿದರು.

ಇದೇ ಗೌರವ ಆದರಗಳು ಅಣ್ಣಾ ಅವರನ್ನು ತಿಹಾರ್ ಜೈಲಿಗೆ ಕಳಿಸುವಾಗ ಕಾಣಿಸಲಿಲ್ಲ.(ಅದೇ ಜೈಲಿನಲ್ಲಿ ಅವರ ಮಾಜಿ ಕ್ಯಾಬಿನೆಟ್ ಸಚಿವರು, ಸಹದ್ಯೋಗಿಗಳು ಇದ್ದರು)

ಸಂಸತ್ತಿನಲ್ಲಿ ಜನ ಲೋಕಪಾಲ್ ವಿಧೇಯಕದ ಬಗ್ಗೆ ಸರ್ಕಾರ ಚರ್ಚೆ ನಡೆಸುವ ಭರವಸೆ ಕೊಟ್ಟ ಮೇಲೆ ಸಾಮೂಹಿಕವಾಗಿ ನೆಮ್ಮದಿಯ ನಿಟ್ಟುಸಿರು ಕಾಣಿಸಿಕೊಂಡಿತು. ಸಂಧಾನ ಮಾತುಕತೆ, ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಯುವ ನೇತಾರರ ಭಾಷಣ, ಲೋಕಪಾಲಕ್ಕೆ ಸಾಂವಿಧಾನಿಕ ಸಂಸ್ಥೆ ಸ್ಥಾನಮಾನ ನೀಡುವುದರ ಬಗ್ಗೆ ಹೆಚ್ಚು ಒತ್ತು ನೀಡಿದ್ದು, ಪೂರ್ಣಾವಧಿ ಪರಿಹಾರಕ್ಕಾಗಿ ಹೆಚ್ಚಿನ ಕಾಲಾವಧಿ ಅಗತ್ಯತೆಯ ಬಗ್ಗೆ ಹೇಳಿದ್ದು.. ಇತ್ಯಾದಿ ನಡೆಯಿತು.

ಇದರ ಒಳಾರ್ಥವೆಂದರೆ, ದೇಶವನ್ನು ಭ್ರಷ್ಟಾಚಾರದ ಪ್ರವಾಹದಲ್ಲಿ ತೇಲಿಸಿ, ಮುಳುಗಿಸುವುದು. ಭ್ರಷ್ಟರಿಗೆ ನೆಲೆ ನಿರ್ಮಿಸುವುದು, ಸರ್ಕಾರ ಏನೋ ಮಾಡುತ್ತದೆ ಎಂದು ನಾವು ಕಾಯುತ್ತಾ ಕೂರುವುದಾಗಿದೆ.

ಸಂಸತ್ತಿನ ಪರಮಾಧಿಕಾರದ ಬಗ್ಗೆ ದೆಹಲಿ ಆಡಳಿತ ಮಾತಾಡುತ್ತಿದೆ. ಅವರಿಗೆ ನಿಜವಾಗಿಯೂ ಪ್ರಜಾಪ್ರಭುತ್ವ, ಸಂವಿಧಾನದ ಅರ್ಥ ತಿಳಿದ್ದಂತಿಲ್ಲ.

'we the people' ಎಂದು ಡಾ. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದಾಗ ಬರೆದಿದ್ದಾರೆ. ಇದರ ಅರ್ಥ ಪ್ರಜೆಗಳೆ ನಿಜವಾದ ಪ್ರಭುಗಳು. ಕಾರ್ಯಾಂಗ ಹಾಗೂ ನ್ಯಾಯಾಂಗದಂತೆ ಸಂಸತ್ತಿನ ಪರಮಾಧಿಕಾರವು ಒಂದು ಅಂಗ. ಜನತೆಗಿಂತ ಸಂಸತ್ತಿಗೆ ಹೆಚ್ಚಿನ
ಪ್ರಾಧಾನ್ಯತೆ ನೀಡಿದರೆ ಸಂವಿಧಾನದ ಬುಡವನ್ನೇ ಅಲ್ಲಾಡಿಸಿದಂತೆ.

ಜನರ ಆಶೋತ್ತರ ಹಾಗೂ ಭಾವನೆಗಳಿಗೆ ಸೂಕ್ತವಾಗಿ ಸ್ಪಂದಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಥಾಮಸ್ ಜೆಫರ್ ಸನ್ ಹೇಳುವಂತೆ" "A little Rebellion now and then is a good thing. It"s a medicine necessary for the sound health of the Government" ಅಣ್ಣಾಗೆ ಜೈ ಎನ್ನಲೇಬೇಕು.

ಇದು ದಿನಾಂಕ 28, 2011ರಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+