ನಿತ್ಯಾನಂದ ಸ್ವಾಮಿಗೆ ಹಾರ್ಟ್ ಪ್ರಾಬ್ಲಂ, ಆಸ್ಪತ್ರೆಗೆ ದಾಖಲು

ನಿತ್ಯಾನಂದ ಅವರ ಬಗ್ಗೆ ಆತಂಕ ಪಡುವ ಕಾರಣವಿಲ್ಲ. ಸ್ವಾಮಿಗಳಿಗೆ ಯಾವುದೇ ದೊಡ್ಡ ಕಾಯಿಲೆ ಬಂದಿಲ್ಲ. ನಾರಾಯಣ ಹೃದಯಾಲಯದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿ ಆದಷ್ಟು ಬೇಗ ಆಶ್ರಮಕ್ಕೆ ಕರೆತರಲಾಗುವುದು ಎಂದು ಬಿಡದಿ ಆಶ್ರಮವಾಸಿಗಳು ಹೇಳಿದ್ದಾರೆ.
ಇದು ಎರಡನೆ ಬಾರಿ: ಹಿಮಾಚಲ ಪ್ರದೇಶದಿಂದ ಸಿಐಡಿ ಪೊಲೀಸರು ಬಿಡದಿಗೆ ಕರೆತಂದು ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ಸಂದರ್ಭದಲ್ಲೂ ನಿತ್ಯಾನಂದ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆಗ ಜಯದೇವ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿತ್ತು.
ಜೂನ್ ತಿಂಗಳಲ್ಲಿ ಕುದುರೆ ಸವಾರಿ ಅಭ್ಯಾಸ ಮಾಡುತ್ತಿರಬೇಕಾದರೆ ಕೆಳಗೆ ಬಿದ್ದು, ನಿತ್ಯಾನಂದರು ಕೈ ಮುರಿದುಕೊಂಡಿದ್ದರು. ಆಮೇಲೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂಳೆ ತಜ್ಞ ಡಾ. ರಾಜ್ ಚಕ್ರವರ್ತಿ ಅವರು ಎರಡೂ ಕೈಗಳ ಮೂಳೆಯನ್ನು ಸರಿ ಹೊಂದಿಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದರು.












Click it and Unblock the Notifications