ಎಚ್ಡಿಕೆ ದಂಪತಿ ಲೋಕಾಯುಕ್ತ ಕೋರ್ಟಿಗೆ ಹಾಜರಾಗಲ್ಲ

ಹೀಗಾಗಿ ದಂಪತಿಗಳು ಲೋಕಾಯುಕ್ತ ಕೋರ್ಟ್ ಗೆ ಹಾಜರಾಗುವುದು ಅನಿವಾರ್ಯವಾಗಿದೆ.ಆದರೆ, ಮುಂದಿನ ವಿಚಾರಣೆ ನಿಗದಿಪಡಿಸಿಲ್ಲ.
ಮಂಗಳವಾರ ಬೆಳಗ್ಗೆ ಸರಿಯಾಗಿ 10.30ಕ್ಕೆ ಆರಂಭವಾಗಬೇಕಿದ್ದ ವಿಚಾರಣೆ ಹತ್ತು ನಿಮಿಷ ತಡವಾಗಿ ಆರಂಭವಾಯಿತು. ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಪರ ವಕೀಲ ಹಜ್ಮತ್ ಪಾಶಾ ವಾದ ಮಂಡಿಸಿ ಎರಡು ವಾರಗಳ ಕಾಲ ಪ್ರಕರಣ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿದರು.
ನ್ಯಾಯಮೂರ್ತಿ ಕೆಎನ್ ಕೇಶವ ನಾರಾಯಣ ಅವರು ವಿಚಾರಣೆ ಬಳಿಕ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದರು. ಪ್ರಕರಣ ತಡೆ ನೀಡಲು ನಿರಾಕರಿಸಿದರು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಕೇಸ್ ದಾಖಲೆಯಾಗಿರುವುದರಿಂದ ಸುಪ್ರೀಂ ಕೋರ್ಟ್ ಹೇಳಿರುವಂತೆ ಈ ಪ್ರಕರಣದಲ್ಲಿ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಆದೇಶ ನೀಡಿದ್ದಾರೆ.
ಎಲ್ಲರ ಚಿತ್ತ ಸಿವಿಲ್ ಕೋರ್ಟ್ ನತ್ತ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ. 8 ರಂದು ಲೋಕಾಯುಕ್ತ ವಿಶೇಷ ನ್ಯಾಯಲಯದಿಂದ ಎಚ್ಡಿಕೆ ದಂಪತಿಗೆ ಸಮನ್ಸ್ ಜಾರಿಯಾಗಿದೆ. ಲೋಕಾಯುಕ್ತ ಕೋರ್ಟ್ ಗೆ ಕುಮಾರಸ್ವಾಮಿ ಅವರು ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಸಮೇತ ಆ.30 ರಂದು ಮಧ್ಯಾಹ್ನ 3 ಗಂಟೆಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಹೇಳಿದ್ದರು.
ಬಂಧನದ ಭೀತಿಯಲ್ಲಿ ಎಚ್ಡಿಕೆ ದಂಪತಿ: ಕೋರ್ಟ್ ಕಟಕಟೆ ಹತ್ತುವುದನ್ನು ತಪ್ಪಿಸಿಕೊಳ್ಳಲು ಯಡಿಯೂರಪ್ಪ ಅವರಂತೆ ಅನಾರೋಗ್ಯದ ನೆಪ ಹಿಡಿಯಬಹುದು. ಹಾಗೇನಾದರೂ ಆದರೆ, ಕೋರ್ಟ್ ಬಂಧನದ ವಾರೆಂಟ್ ವಿಧಿಸುತ್ತದೆ. ಬಂಧನದ ಭೀತಿಗೆ ಒಳಗಾಗಿರುವ ದಂಪತಿಗಳು ಹೆಚ್ಚುಕಮ್ಮಿ ಇವತ್ತು ಕಟಕಟೆಯಲ್ಲಿ ನಿಲ್ಲುವುದು ಗ್ಯಾರಂಟಿ ಎನ್ನಲಾಗಿತ್ತು.
ಆದರೆ, ಕೊನೆ ಕ್ಷಣದಲ್ಲಿ ಎಚ್ಡಿಕೆ ಪರ ವಕೀಲ ಹಜ್ಮತ್ ಮಾತನಾಡಿ, ದಂಪತಿಗಳು ಇವತ್ತು ಕೋರ್ಟ್ ಹಾಜರಾತಿಯಿಂದ ವಿನಾಯತಿ ಕೋರಿ ಅರ್ಜಿ ಸಲ್ಲಿಸಲಿದ್ದಾರೆ. ಮಧ್ಯಾಹ್ನ ಕೋರ್ಟ್ ವಿಚಾರಣೆಗೆ ಹಾಜರಾಗುವುದಿಲ್ಲ ಎಂದಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.












Click it and Unblock the Notifications