ಕಟಕಟೆಯಲ್ಲಿ ಯಡ್ಡಿ, ಹಲ್ಲು ಕಡಿಯುತ್ತಿರುವ ರೇಣು

ಯಡಿಯೂರಪ್ಪ ಕೋರ್ಟ್ ಗೆ ಬರುತ್ತಾರಾ? ಇಲ್ಲವಾ? ಕಟ್ಟಾದ್ವಯರಿಗೆ ಆದಂತೆ ಯಡ್ಡಿ ಅಂಡ್ ಸನ್ ಕೂಡಾ ಜೈಲಿಗೆ ಹಾಕುತ್ತಾರಾ? ಎಂಬ ಕುತೂಹಲಕರ ಪ್ರಶ್ನೆಗಳನ್ನು ಹೊತ್ತುಕೊಂಡು ಅಪಾರ ಸಂಖ್ಯೆಯಲ್ಲಿ ಜನಜಂಗುಳಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ಆವರಣದಲ್ಲಿ ನೆರೆದಿದೆ. ಯಡ್ಡಿ ನೋಡಲು ನೂಕು ನುಗ್ಗಲು ಉಂಟಾಗಿತ್ತು. ಆದರೆ, ಪರಿಸ್ಥಿತಿ ಕೈಮೀರಿಲ್ಲ ಎಂದು ನಮ್ಮ ವರದಿಗಾರರು ಹೇಳಿದ್ದಾರೆ.
ಪೊಲೀಸ್ ರೆಡಿ : ಈ ಮಧ್ಯೆ ಭಾನುವಾರವೇ ಈ ಬಗ್ಗೆ ಸೂಕ್ತ ತಯಾರಿ ನಡೆಸಿದ್ದ ಡಿಸಿಪಿ ರಮೇಶ್ ನೇತೃತ್ವದ ತಂಡಕ್ಕೆ 10 ಕೆಎಸ್ ಆರ್ ಪಿ ತುಕಡಿಗಳು 15ಕ್ಕೂ ಹೆಚ್ಚು ಎಸ್ ಐಗಳು, 100ಕ್ಕೂ ಹೆಚ್ಚು ಪೊಲೀಸರು ಕೋರ್ಟ್ ಒಳ ಆವರಣದಲ್ಲಿ ಗಸ್ತು ತಿರುಗುತ್ತಿದ್ದಾರೆ.
ರೇಣುಕಾ ಸೇನೆ: ಯಡಿಯೂರಪ್ಪ ಅವರು ನಮ್ಮ ನಾಯಕರು, ಅವರ ಜೊತೆಗೆ ನಾವು ಕೋರ್ಟ್ ಗೆ ಬರುತ್ತೇವೆ. ಏನು ಆಗುತ್ತೋ ನೋಡೇಬಿಡೋಣ ಎಂದು ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರ ಬೆಂಬಲಿಗರನ್ನು ಒಟ್ಟು ಮಾಡಿಕೊಂಡು ಕೋರ್ಟ್ ನತ್ತ ಸಾಗಲು ಸನ್ನದ್ಧರಾಗಿದ್ದಾರೆ.
ಕೋರ್ಟ್ ನಿಂದ ಸೂಚನೆ ಹೊರಬಿದ್ದಂತೆ ರೇಣು ಸೇನೆ ಗಲಭೆ ನಡೆಸುವ ಸುದ್ದಿ ಇದೆ. ರೇಣುಕಾ ಜೊತೆ ಹಾಲಿ ಶಾಸಕರು ಯಾರಾದರೂ ಇದ್ದಾರಾ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಒಂದು ವೇಳೆ ಜಾಮೀನು ಅರ್ಜಿ ತಿರಸ್ಕಾರಗೊಂಡು ವಿಚಾರಣೆಗಾಗಿ ತಮ್ಮನ್ನು ಬಂಧಿಸಲು ಕೋರ್ಟ್ ಆದೇಶ ನೀಡಿದರೆ, ಎಲ್ಲೆಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಸ್ವತಃ ಯಡಿಯೂರಪ್ಪ ಅವರೇ ತಮ್ಮ ಆಪ್ತರಿಗೆ ಸೂಚನೆ ನೀಡಿದ್ದಾರೆ. ಗವಿ ಗಂಗಾಧರೇಶ್ವರ ದೇಗುಲದಿಂದ ಬಂದ ನಂತರ ಆಪ್ತರ ಶಾಸಕರು, ಸಚಿವರುಗಳ ಜೊತೆ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದಾರೆ.
ಯಡಿಯೂರಪ್ಪ ಬಂಧನ ತಡೆಯಲು ರೇಣು ಸೇನೆ ಸನ್ನದ್ಧವಾಗಿದೆ. ಕೋರ್ಟ್ ಒಳಗಡೆ ಸಿರಾಜಿನ್ ಬಾಷಾ vs ಯಡಿಯೂರಪ್ಪ, ರವಿ ನಾಯ್ಕ vs ಹನುಮಂತರಾಯ ಯುದ್ಧ ಹೊರಗಡೆ ಡಿಸಿಪಿ ರಮೇಶ್ vs ರೇಣು ಸೇನ ಫೈಟ್.
ಇದೀಗ ಬಂದಿರುವ ವರ್ತಮಾನದ ಪ್ರಕಾರ, ಡಿನೋಡಿಫಿಕೇಷನ್ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಹಗರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟ್ ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿದೆ. ಇಂದೇ ವಿಚಾರಣೆ ನಡೆದು ಜಾಮೀನು ಸಿಗದೆ ಗೌರಿ-ಗಣೇಶ ಹಬ್ಬ ಹೇಗೋ ಏನೋ ಎನ್ನುವಂತಾಗಿತ್ತು. ಸದ್ಯಕ್ಕೆ, ಯಡಿಯೂರಪ್ಪ ನಿರಾಳವಾಗಿ ಗಣೇಶ ಹಬ್ಬ ಆಚರಿಸಬಹುದು.












Click it and Unblock the Notifications