ಶೀಘ್ರವೇ ಸಕಲೇಶಪುರದಿಂದ ಶ್ರವಣಬೆಳಗೊಳಕ್ಕೆ ರೈಲು

ಹಾಸನ-ಶ್ರವಣಬೆಳಗೊಳ ನಡುವಿನ ರೈಲು ಮಾರ್ಗವನ್ನು ದಕ್ಷಿಣ ಮತ್ತು ನೈರುತ್ಯ ವಲಯ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ ನಾರಾಯಣ್ ನೇತೃತ್ವದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ಇದರ ಜೊತೆಗೆ ಮೈಸೂರು-ಹಾಸನ ನಡುವೆ ನೂತನವಾಗಿ ಹೆಚ್ಚುವರಿ ರೈಲೊಂದನ್ನು ಓಡಿಸಲು ಯೋಜಿಸಲಾಗಿದೆ. ಇದಕ್ಕಾಗಿ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ತಮ್ಮ ಬೇಡಿಕೆಗೆ ಹಸಿರು ನಿಶಾನೆಯೂ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದರು.
ಅರಸೀಕೆರೆಯಿಂದ ಹಾಸನ ಮಾರ್ಗವಾಗಿ ಮೈಸೂರಿಗೆ ಹೊಸ ರೈಲು ಸೇವೆಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಮೇ ತಿಂಗಳಿನಲ್ಲಿ ಸಲ್ಲಿಸಿದ ಪ್ರಸ್ತಾವನೆಗೆ ರೈಲ್ವೇ ಸುರಕ್ಷತಾ ಮಂಡಳಿ ಸೂಕ್ತವಾಗಿ ಸ್ಪಂದಿಸಿದೆ ಎಂದು ವರ್ಮಾ ಹೇಳಿದರು.












Click it and Unblock the Notifications