ಯಡ್ಡಿ ಜಾಮೀನು ವಿಚಾರಣೆ ಮುಂದಕ್ಕೆ! ಬದುಕಿದೆಯಾ ಬಡಜೀವ

ಬೆಂಗಳೂರಿನ ಭೂಹಗರಣ ಸಂಬಂಧ (ಅಕ್ರಮ ಡಿನೋಟಿಫಿಕೇಶನ್) ವಕೀಲ ಸಿರಾಜಿನ್ ಬಾಷಾ ಅವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಬೆಳಗ್ಗೆ ತಿರಸ್ಕರಿಸಿತ್ತು. ಲೋಕಾಯುಕ್ತ ನ್ಯಾಯಮೂರ್ತಿ ಎನ್. ನಾರಾಯಣ ಸ್ವಾಮಿ ವಿಚಾರಣೆ ನಡೆಸಿದರು. ಲೋಕಾಯುಕ್ತ ಪರ ಪ್ರಮೋದ್ ಚಂದ್ರ ವಾದ ಮಂಡಿಸಿದರು.
ಬೆಂಗಳೂರಿನ ಅರಕೆರೆ, ದೇವರಚಿಕ್ಕನಹಳ್ಳಿ ಮತ್ತು ಗೆದ್ದಲಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಡಿನೋಟಿಫಿಕೇಷನ್ಗೆ ಸಂಬಂಧಿಸಿದ ಪ್ರಕರಣ. ನ್ಯಾಯಾಲಯದಲ್ಲಿ ಸೋಮವಾರ (ಆಗಸ್ಟ್ 29) ಖುದ್ದಾಗಿ ಹಾಜರಿರಲೇಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಕೆ. ಸುಧೀಂದ್ರ ರಾವ್ ಅವರು ಆಗಸ್ಟ್ 8 ರಂದು ಯಡಿಯೂರಪ್ಪಗೆ ಸಮನ್ಸ್ ಜಾರಿಗೊಳಿಸಿದ್ದರು.
ಅಕ್ರಮ ಡಿನೋಟಿಫಿಕೇಶನ್ ಸಂಬಂಧ ಯಡಿಯೂರಪ್ಪ ವಿರುದ್ಧ ವಕೀಲರಾದ ಸಿರಾಜೀನ್ ಪಾಷಾ ಮತ್ತು ಎನ್ ಕೆ ಬಾಲರಾಜ್ ಜನವರಿ 21ರಂದು ಪ್ರಕರಣ ದಾಖಲಿಸಿದ್ದರು. ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಮತ್ತು ಬಿವೈ ವಿಜಯೇಂದ್ರ, ಅಳಿಯ ಸೋಹನ್ ಕುಮಾರ್ ಮತ್ತು ಇತರೆ 11 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮೂವರೂ ಕೋರ್ಟಿನಲ್ಲಿ ಹಾಜರಿದ್ದರು.
ಕೇಂದ್ರ ಡಿಸಿಪಿ ರಮೇಶ್ ನೇತೃತ್ವದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.












Click it and Unblock the Notifications