ಖಂಡಿತಾ ಕೋರ್ಟಿಗೆ ಹಾಜರಾಗುವೆ, ಮೈಲಾರ್ಡ್
ಬೆಂಗಳೂರು,
ಆಗಸ್ಟ್ 29: ಲೋಕಾಯುಕ್ತ ಕೋರ್ಟಿನಲ್ಲಿ ಇಂದು (ಸೋಮವಾರ) ಮಧ್ಯಾಹ್ನ ಹಾಜರಾಗುವೆ ಮಾಹಾಸ್ವಾಮಿ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಳಗ್ಗೆ 10 ಗಂಟೆಗೆ ಪ್ರಕಟಿಸಿದ್ದಾರೆ. id="toptextpromo">ಪ್ರಸ್ತುತ,
ಜ್ವರ ಮತ್ತಿತರ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಧೀಂದ್ರ ರಾವ್ ಅವರೆದುರು ನೇರವಾಗಿ ಕೋರ್ಟಿಗೆ ಹಾಜರಾಗುವೆ ಎಂದು ಸಾಗರ್ ಆಪೊಲೊ ಆಸ್ಪತ್ರೆಯಿಂದ ಹೊರಡಿಸಿರುವ ಹೇಳಿಕೆಯಲ್ಲಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ, ಯಡಿಯೂರಪ್ಪ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವ ಹಿನ್ನೆಲೆಯಲ್ಲಿ ಕೇಂದ್ರ ಡಿಸಿಪಿ ರಮೇಶ್ ನೇತೃತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎರಡು ಕೆಎಸ್ಆರ್ ಪಿ ತುಕಡಿಗಳು ಮತ್ತು ನೂರಾರು ಪೊಲೀಸರನ್ನು ನ್ಯಾಯಾಲಯದ ಆಸುಪಾಸಿನಲ್ಲಿ ನಿಯೋಜಿಸಲಾಗಿದೆ.











Click it and Unblock the Notifications