ಅಣ್ಣಾನಿಗಾಗಿ ಮರಾಠಿಗರನ್ನು ಒಗ್ಗೂಡಿಸಿದ ಮೇಧಾ

ಟಾಟಾ ಇನ್ಸಿಟ್ಯೂಟ್ ನಿಂದ ಸಮಾಜ ಸೇವೆಯಲ್ಲಿ ಎಂಎ ಪದವಿ ಪಡೆದು, ಒಂದು ಕಾಲದಲ್ಲಿ ಟಾಟಾ ಸಂಸ್ಥೆ ಉದ್ಯೋಗಿಯಾಗಿದ್ದದ ಮೇಧಾ, ಸಿಂಗೂರಿನಲ್ಲಿ ರೈತರ ಭೂಮಿಯಲ್ಲಿ ಟಾಟಾ ನ್ಯಾನೋ ಘಟಕ ಸ್ಥಾಪನೆಗೆ ವಿರೋಧಿಸಿ, ಟಾಟಾ ಸಂಸ್ಥೆಯನ್ನು ಉಚ್ಚಾಟಿಸಿದ್ದು ವಿಶೇಷ.
ಲಾವಸಾ ಭೂ ಒತ್ತುವರಿ ಹಗರಣದಲ್ಲಿ ಅಣ್ಣಾ ಹಜಾರೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕರ್ತರೊಡಗೂಡಿ PIL ಅರ್ಜಿ ಸಲ್ಲಿಸಿ ಹೋರಾಟ ನಡೆಸಿದರು. ಅಣ್ಣಾ ಬಗ್ಗೆ ಅಪಸ್ವರ ಎತ್ತುತ್ತಿದ್ದ ಶಿವಸೇನೆ ಬಾಳಾ ಠಾಕ್ರೆ ಸೇರಿದಂತೆ ಹಲವು ಅಪ್ಪಟ ಮರಾಠಿಗರಿಗೆ ತಿಳಿ ಹೇಳಿ, ಅಣ್ಣಾಗೆ ಬೆಂಬಲ ಸಿಗುವಂತೆ ಮಾಡಿದ್ದೇ ಮೇಧಾ ಎಂದು ಸುದ್ದಿ ಯಿದೆ.
ಬಾಬಾ ಅಪ್ಟೆ ಅವರ ಜೊತೆ ಪ್ರತಿಷ್ಠಿತ ರೈಟ್ ಲಿವ್ಲಿ ಹುಡ್ ಪ್ರಶಸ್ತಿ ಪಡೆದಿರುವ ಮೇಧಾ ಅವರು ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲಿನ ಗುಂಡ್ಯಾ ಜಲ ವಿದ್ಯುತ್ ಯೋಜನೆ, ಹಣಕೋಣ ವಿದ್ಯುತ್ ಯೋಜನೆ ವಿರುದ್ಧದ ಹೋರಾಟಕ್ಕೂ ಬೆಂಬಲ ನೀಡಿದ್ದಾರೆ. ಭ್ರಷ್ಟಾಚಾರ ವಿರುದ್ಧದ ಟೀಂ ಅಣ್ಣಾ ಹೋರಾಟಕ್ಕೆ ನಿಧಾನವಾಗಿ ಸೇರಿಕೊಂಡರು ಮೇಧಾ ಪ್ರಧಾನ ಪಾತ್ರವಹಿಸಿದ್ದು ಸುಳ್ಳಲ್ಲ.












Click it and Unblock the Notifications