ಲೋಕಪಾಲಕ್ಕಾಗಿ 1977ರಿಂದ ಶಾಂತಿ ಭೂಷಣ್ ಹೋರಾಟ

1977ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಶಾಂತಿ ಭೂಷಣ್ ಅವರು ಪ್ರಪ್ರಥಮ ಬಾರಿಗೆ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. 86 ವರ್ಷದ ಶಾಂತಿ ಭೂಷಣ್ ಅವರು ನ್ಯಾಯಾಂಗ ವ್ಯವಸ್ಥೆಯ ಭ್ರಷ್ಟಾಚಾರದ ವಿರುದ್ಧ ಬಂಡೆದ್ದವರು.
CJAR ಅಭಿಯಾನದ ಮೂಲಕ ಹೋರಾಟ ಮುಂದುವರೆಸಿರುವ ಶಾಂತಿ ಅವರು ಅಣ್ಣಾ ಅವರ ಆಶಯಕ್ಕೆ ತಕ್ಕಂತೆ ಜನ ಲೋಕಪಾಲ ಮಸೂದೆಯ ಕರಡನ್ನು ರಚಿಸಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಿದರು.
ಇಂದಿರಾಗಾಂಧಿ ವಿರುದ್ಧ ರಾಜ್ ನಾರಾಯಣ್ ಹೂಡಿದ್ದ ದಾವೆಯಲ್ಲಿ ಸಮರ್ಧವಾಗಿ ವಾದ ಮಂಡಿಸಿದ ಶಾಂತಿ ಭೂಷಣ್ ಅವರು ಜಯ ಗಳಿಸಿದರು. ಆದರೆ, ಇಂದಿರಾ ತಪ್ಪಿತಸ್ಥೆ ಎಂದು ಜಸ್ಟೀಸ್ ಜಗನ್ಮೋಹನ್ ಲಾಲ್ ಸಿಂಹ ಘೋಷಿಸುತ್ತಿದ್ದಂತೆ ಗಲಭೆ, ಗೊಂದಲ, ಘರ್ಷಣೆಗಳು ನಡೆದು ಕೊನೆಗೆ ದೇಶದಲ್ಲಿ ಎಮರ್ಜೆನ್ಸಿ ಡಿಕ್ಲೇರ್ ಆಗಿಬಿಟ್ಟಿದ್ದು ಇತಿಹಾಸ.
ಪ್ರಬಲ ಮಸೂದೆಗಾಗಿ ಹೋರಾಡುತ್ತಾ ಬಂದಿರುವ ಶಾಂತಿ ಭೂಷಣ್ ಅವರು ಟೀಂ ಅಣ್ಣಾ ಸೇರಿದ ಮೇಲೆ ಪ್ರಬಲ ಲೋಕಪಾಲ ರಚಿಸಿ ಜನೋಪಯೋಗಿ ಕಾರ್ಯವನ್ನು ಮುಂದುವರೆಸಿದ್ದಾರೆ. ಶಾಂತಿ ಭೂಷಣ್ ದೇಶಕ್ಕೆ ಭೂಷಣಪ್ರಾಯರಾಗಿದ್ದಾರೆ.












Click it and Unblock the Notifications