ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೀಂ ಅಣ್ಣಾ ಕಾನೂನು ತಜ್ಞ PIL ಪ್ರಶಾಂತ್ ಭೂಷಣ್

By Mahesh
|
Google Oneindia Kannada News

PIL Lawyer Prashanth Bhushan
ನವದೆಹಲಿ, ಆ.28: ಅಣ್ಣಾ ಹಜಾರೆ ಅವರ ಪ್ರಬಲ ಜನ ಲೋಕಪಾಲ ಮಸೂದೆ ಕರಡು ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಅಪ್ಪ ಶಾಂತಿ ಭೂಷಣ್ ಹಾಗೂ ಮಗ ಪ್ರಶಾಂತ್ ಭೂಷಣ್ ಅವರ ಅಣ್ಣಾ ಕನಸಿನ ಕಾನೂನು ರಚಿಸಿದ್ದಾರೆ.

ವೃತ್ತಿಯಿಂದ ವಕೀಲರಾದ ಪ್ರಶಾಂತ್ ಭೂಷಣ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ದಾಖಲಿಸುವ ಮೂಲಕ ಹೆಚ್ಚು ಜನಾನುರಾಗಿಯಾದರು. ಪರಿಸರ ಯೋಜನೆಗಳಲ್ಲಿ ಅವ್ಯವಹಾರ, ಭ್ರಷ್ಟಾಚಾರಿಗಳ ವಿರುದ್ಧ ಅನೇಕ ಪಿಐಎಲ್ ಗಳನ್ನು ಪ್ರಶಾಂತ್ ದಾಖಲಿಸಿದ್ದಾರೆ.

15 ವರ್ಷಗಳಲ್ಲಿ ಸುಮಾರು 500ಕ್ಕೂ ಅಧಿಕ PIL ಗಳನ್ನು ಕೋರ್ಟ್ ಗೆ ಸಲ್ಲಿಸಿ, ಅನೇಕ ಬಾರಿ ನ್ಯಾಯ ಪಡೆದಿದ್ದಾರೆ. ಐಐಟಿ ಮದ್ರಾಸ್ ನಲ್ಲಿ ಮೆಕಾನಿಕಲ್ ವಿಷಯ ವ್ಯಾಸಂಗ ಮಾಡುತ್ತಿದ್ದ ಪ್ರಶಾಂತ್, ಆರ್ಥಿಕ ವ್ಯವಸ್ಥೆ ಹಾಗೂ ತತ್ವಶಾಸ್ತ್ರದತ್ತ ಆಕರ್ಷಿತರಾಗಿದ್ದು ವಿಶೇಷ.

ಹಿರಿಯ ವಕೀಲ ಶಾಂತಿ ಭೂಷಣ್ ಅವರೊಡನೆ ಸೇರಿ ಜನ ಲೋಕಪಾಲ ಮಸೂದೆಯ ಕರಡು ಪ್ರತಿ ತಿದ್ದಿದ್ದಾರೆ. ಬಹುಕೋಟಿ 2ಜಿ ಹಗರಣವನ್ನು ಬಯಲಿಗೆಳೆದಿದ್ದು ಪ್ರಶಾಂತ್ ಭೂಷಣ್ ಅವರ PIL ನಿಂದ ಎಂಬುದು ಗಮನಾರ್ಹ. ಇದಲ್ಲದೆ ಭೋಪಾಲ್ ಅನಿಲ ದುರಂತ, ದೂನ್ ಕಣಿವೆ ಕೇಸ್, ನರ್ಮದಾ ಕೇಸ್, ಸಿವಿಸಿ ಥಾಮಸ್ ನೇಮಕದ ಬಗ್ಗೆ ಅರ್ಜಿ ಸಲ್ಲಿಸಿದ್ದರು.

ಅಣ್ಣಾ ಅವರ ಹೋರಾಟಕ್ಕೆ ಕಾನೂನಿನ ಬೆಂಬಲ ಹಾಗೂ ಕರಡು ಪ್ರತಿಯ ಲೋಪದೋಷಗಳನ್ನು ಸರಿಪಡಿಸುತ್ತಾ ಟೀಂ ಅಣ್ಣಾದ ಜನ ಸೇವಕನಾಗಿ ಹೊರಹೊಮ್ಮಿದ್ದಾರೆ. ಕಾನೂನು ಪಾಲಕ ಪ್ರಶಾಂತ್ ಗೆ ನಮ್ಮ ನಮನ.

English summary
Activist Prashant Bhushan a lawyer by profession better known for filing public interest litigation against various corrupt bodies. After joining team Anna, he has co drafted Jan lokpal bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X