ದಕ್ಷ ಸಂಧಾನಗಾರ್ತಿ ಕಿರಣ್ ಬೇಡಿ ಐಪಿಎಸ್

Kiran Bedi
ನವದೆಹಲಿ, ಆ.28: ಅಣ್ಣಾ ಹಜಾರೆ ಅವರ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಕರೆಗೆ ಓಗೊಟ್ಟು ಬೆಂಬಲವಾಗಿ ನಿಂತ ಭಾರತದ ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಇಂದು ದಕ್ಷ ಸಂಧಾನಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

80 ರ ದಶಕದಲ್ಲಿ ಪಾರ್ಕಿಂಗ್ ನಿಯಮ ಮುರಿದ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರಿಗೆ ನೋಟಿಸ್ ನೀಡಿದ್ದ ದಿಟ್ಟ ಐಪಿಎಸ್ ಅಧಿಕಾರಿ ಕಿರಣ್ ಬೇಡಿ.

ಪಂಜಾಬಿನ ಅಮೃತ್ ಸರ ಮೂಲದ 62 ವರ್ಷದ ಕಿರಣ್ ಬೇಡಿ ಅವರು, 2007ರಲ್ಲಿ ಸ್ವಯಂ ನಿವೃತ್ತಿ ಪಡೆದರೂ ಸುಮ್ಮನೆ ಕೂಡಲಿಲ್ಲ. ಸ್ಟಾರ್ ಟಿವಿಯಲ್ಲಿ ಆಪ್ ಕಿ ಕಚೇರಿ ಎಂಬ ಕಾರ್ಯಕ್ರಮದ ಮೂಲಕ ಜನ ಅದಾಲತ್ ನಡೆಸಿದರು. ಮಕ್ಕಳು ಹಾಗೂ ಖೈದಿಗಳ ಸುಧಾರಣೆಗಾಗಿ ಎರಡು ಎನ್ ಜಿಒಗಳನ್ನು ನಡೆಸುತ್ತಾ ಬಂದಿದ್ದಾರೆ.

ಇವರ ವೃತ್ತಿ ಹಾಗೂ ಸಾಮಾಜಿಕ ಕ್ರಾಂತಿಯನ್ನು ಗಮನಿಸಿ ಹತ್ತು ಹಲವು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದೆ. ರಾಷ್ಟ್ರಪತಿಗಳ ಶೌರ್ಯ ಪ್ರಶತಿ, ವಿಶ್ವಸಂಸ್ಥೆ ಪ್ರಶಸ್ತಿ ಸೇರಿದಂತೆ ಅಪಾರ ಜನ ಪ್ರೀತ್ಯಾದರಗಳನ್ನು ಬೇಡಿ ಪಡೆದಿದ್ದಾರೆ.

ಅಣ್ಣಾ ಟೀಂ ಸೇರಿದ ಮೇಲೆ ಅರವಿಂದ ಕೆಜ್ರಿವಾಲ, ಭೂಷಣ್ ಅವರೊಡನೆ ಸಂಧಾನಕಾರರಾಗಿದ್ದಾರೆ. ಯುಪಿಎ ಸರ್ಕಾರದೊಡನೆ ದಿಟ್ಟವಾಗಿ ಸಂಧಾನ ಪ್ರಕ್ರಿಯೆಯನ್ನು ಜನ ಲೋಕಪಾಲ್ ಮಸೂದೆ ಬಗ್ಗೆ ಚರ್ಚಿಸಿದ್ದಾರೆ. ಅಣ್ಣಾ ಅವರ ಆಶಯವನ್ನು ಸರ್ಕಾರಕ್ಕೂ ಜನತೆಗೂ ಮನವರಿಕೆ ಮಾಡಿಕೊಡುವಲ್ಲಿ ಕಿರಣ್ ಬೇಡಿ ಪಾತ್ರ ಹಿರಿದು, ಥ್ಯಾಂಕ್ಸ್ ಮೇಡಂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+