ನಾನು ಅಣ್ಣಾನ 'ಹನುಮಂತ': ಅರವಿಂದ್ ಕೆಜ್ರಿವಾಲ

ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಖರಗ್ ಪುರದಿಂದ ಹೊರಬಿದ್ದ ಪ್ರತಿಭಾವಂತ ಅರವಿಂದ್ ಕ್ರೇಜಿವಾಲ್ ಅವರು ಹಿಂದೊಮ್ಮೆ ತೆರಿಗೆ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿ ದುಡಿದಿದ್ದಾರೆ.
ದೆಹಲಿ ಮೂಲದ ಸರ್ಕಾರೇತರ ಸಂಸ್ಥೆ 'ಪರಿವರ್ತನ್' ಮೂಲಕ ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಹೋರಾಟ ನಡೆಸಿದ್ದಾರೆ. ಮಾಹಿತಿ ಹಕ್ಕು ಕಾಯಿದೆ ಕಾರ್ಯಕರ್ತ ನಾಗಿ ಉಂಟು ಮಾಡಿದ ಸಂಚಲನದಿಂದ ಅವರಿಗೆ ರಾಮನ್ ಮ್ಯಾಗ್ಸೆಸ್ಸೇ ಪ್ರಶಸ್ತಿ ಕೂಡಾ ಹುಡುಕಿಕೊಂಡು ಬಂದಿತ್ತು.
2006ರಲ್ಲಿ ಈ ಪ್ರತಿಷ್ಠಿತ ಗೌರವ ಪಡೆದ ಅರವಿಂದ್ ಅವರು 'ಭ್ರಷ್ಟಾಚಾರ ವಿರುದ್ಧ ಭಾರತ' ಪ್ರತಿಭಟನೆಯ ಮುಖ್ಯ ರುವಾರಿಯಾಗಿ ಅಣ್ಣಾ ಅವರ ಟೀಮ್ ಸೇರಿದರು, ಪ್ರಬಲ ಜನ ಲೋಕಪಾಲ್ ವಿಧೇಯಕ ರಚನೆಗೆ ತಮ್ಮ ಬೌದ್ಧಿಕ ಜ್ಞಾನವನ್ನು ಹರಿಸಿದ್ದಾರೆ. ಸರ್ಕಾರದೊಡನೆ ನಿರಂತರ ಸಂಧಾನ, ಚರ್ಚೆ ನಡೆಸಿ, ಅಣ್ಣಾ ಅವರ ಕನಸಿಗೆ ಹೊಸ ಸಾಕಾರವನ್ನು ತಂದು ಕೊಟ್ಟಿದ್ದಾರೆ.
ಎರಡನೇ ಸ್ವಾತಂತ್ರ್ಯ ಸಂಗ್ರಾಮದ ವೀರ ಜನಪರ ಹೋರಾಟಗಾರ ಅರವಿಂದ್ ಕ್ರೇಜಿವಾಲ್ ಗೆ ನಮ್ಮ ಅಭಿನಂದನೆಗಳು.











Click it and Unblock the Notifications