ಲಾರಿ ಚಾಲಕ ! ಅಣ್ಣಾ ಹಜಾರೆ ವ್ಯಕ್ತಿ ಚಿತ್ರ

ಭಿಂಗಾರ್ ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅಣ್ಣಾ, 1962 ರಲ್ಲಿ ಮಹಾರಾಷ್ಟ್ರದ ಔರಂಗಾಬಾದಿನಲ್ಲಿ ಭಾರತೀಯ ಸೇನೆಗೆ ಟ್ರಕ್ ಚಾಲಕನಾಗಿ ಸೇರಿಕೊಂಡರು. 1965 ರಲ್ಲಿ ನಡೆದ ಇಂಡೋ - ಪಾಕ್ ಯುದ್ದದಲ್ಲಿ ಅಣ್ಣಾ ಖೇಮ್ ಖಾರ್ ಎನ್ನುವ ಗಡಿಪ್ರದೇಶದಲ್ಲಿ ಸೇವೆ ಸಲ್ಲಿಸಿದರು. 1978 ರಲ್ಲಿ ಸೇನೆಯಿಂದ ವಿಆರ್ ಎಸ್ ತೆಗೆದುಕೊಂಡ ಅಣ್ಣಾ ನಿರಂತರ 12 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದರು.
ಭಾರತೀಯ ಸೇನೆಯಲ್ಲಿ ಅಣ್ಣಾ ಹಜಾರೆಗೆ ಬಂದ ಪ್ರಶಸ್ತಿಗಳು:
*ಸೈನ್ಯ ಸೇವಾ ಮೆಡಲ್
*ನೈನ್ ಇಯರ್ಸ್ ಲಾಂಗ್ ಸರ್ವಿಸ್ ಮೆಡಲ್
*ಸಂಗ್ರಾಮ್ ಮೆಡಲ್
*25ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಮೆಡಲ್
*ಪಾಶಿಮಿ ಸ್ಟಾರ್ ಎವಾರ್ಡ್
ಸೇನೆಯಿಂದ ಸ್ವಯಂ ನಿವೃತ್ತಿ ಹೊಂದಿದ ನಂತರ ಅಣ್ಣಾ ಮಹಾರಾಷ್ಟ್ರದ ಅಹಮದ್ ನಗರದ ರಾಲೆಗಾನ್ ಸಿದ್ದಿ ಎನ್ನುವ ಹಳ್ಳಿಗೆ ತೆರಳಿದರು. ಕಡು ಬಡತನ ಮತ್ತು ಅನಾವೃಷ್ಟಿಯಿಂದ ತತ್ತರಿಸಿ ಹೋಗಿದ್ದ ಈ ಹಳ್ಳಿಯನ್ನು ಮಾದರಿ ಹಳ್ಳಿಯನ್ನಾಗಿ ಪರಿವರ್ತಿಸಲು ಪಣ ತೊಟ್ಟ ಅಣ್ಣಾ, ರೈತರಿಗೆ ಕೃಷಿಯ ಅವಶ್ಯಕತೆಯ ಬಗ್ಗೆ ಮನಪರಿವತನೆ ಮಾಡಿದರು.
ಸರಕಾರದಿಂದ ಬರಬೇಕಾದ ಎಲ್ಲಾ ಸೌಲತ್ತುಗಳನ್ನು ಹೋರಾಟದ ಮೂಲಕ ತರಿಸಿಕೊಂಡರು, ಅಲ್ಲದೆ ಇಡೀ ಈ ಹಳ್ಳಿಯನ್ನು ಮದ್ಯಮುಕ್ತ ಹಲ್ಲಿಯನಾಗಿ ಪರಿವರ್ತಿಸಿ "ದೇಶದಲ್ಲೇ ಮಾದರಿ ಹಳ್ಳಿ"ಯನ್ನಾಗಿ ರೂಪಿಸಿದರು.
ತಮ್ಮ ಹೋರಾಟವನ್ನು ಬರೀ ಈ ಹಳ್ಳಿಗೆ ಸೀಮಿತವಾಗಿರಸದೆ ಮಹಾರಾಷ್ಟ್ರ ರಾಜ್ಯಾದ್ಯಂತ ಭ್ರಸ್ಟಾಚಾರದ ವಿರುದ್ದ ಹೋರಾಟ ಆರಂಭಿಸಿದರು. 12000 ಸಾವಿರಕ್ಕೂ ಹೆಚ್ಚು ಕಿಲೋ ಮೀಟರ್ ಪಾದಯಾತ್ರೆ ನಡೆಸಿದ ಅಣ್ಣಾ, 1998 ರಲ್ಲಿ ಮಹಾರಾಷ್ಟ್ರದ ಅಂದಿನ ಸಮಾಜ ಕಲ್ಯಾಣ ಸಚಿವರ ಅಣ್ಣಾ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದಾಗ ಬಂಧನಕ್ಕೊಳಗಾದರು. ಆದರೆ ಸಾರ್ವಜನಿಕರ ತೀವ್ರ ಪ್ರತಿಭಟನೆಯ ನಂತರ ಅಣ್ಣಾ ಅವರನ್ನು ಬಂಧಮುಕ್ತ ಗೊಳಿಸಲಾಯಿತು.
ಅಣ್ಣಾ ಹಜಾರೆಯವರಿಗೆ ಬಂದ ಪ್ರಶಸ್ತಿಗಳು:
*1986 ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಪ್ರಶಸ್ತಿ
*1989 ರಲ್ಲಿ ಮಹಾರಾಷ್ಟ್ರ ಸರಕಾರದಿಂದ ಕೃಷಿ ಭೂಷಣ್
*1990 ರಲ್ಲಿ ಪದ್ಮಶ್ರೀ
*1992 ರಲ್ಲಿ ಪದ್ಮಭೂಷಣ
* 2008ರಲ್ಲಿ ವಿಶ್ವಬ್ಯಾಂಕಿನ ಜೀಟ್ ಗಿಲ್ ಮೆಮೋರಿಯಲ್ ಪ್ರಶಸ್ತಿ
2011 ರಲ್ಲಿ ಅಣ್ಣಾ ಹಜಾರೆ ಆರಂಭಿಸಿರುವ ಪ್ರಭಲ ಭ್ರಷ್ಟಾಚಾರ ವಿರೋಧಿ ಲೋಕಪಾಲ್ ಮಸೂದೆ ಮಂಡನೆಯ ಆಂದೋಲನದ ನಾಯಕತ್ವ ವಹಿಸಿದರು. ರಾಮಲೀಲಾ ಮೈದಾನದಲ್ಲಿ ಸತತ 12 ದಿನ ಉಪವಾಸ ಸತ್ಯಾಗ್ರಹ ಮಾಡಿ ಜನಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿದರು.












Click it and Unblock the Notifications