ಸಂಸತ್ತಿನ ಸ್ಥಾಯಿ ಸಮಿತಿಯಲ್ಲಿ ಲಾಲೂ, ಅಮರ್ ಸಿಂಗ್!
ಏನಿದು ಸ್ಥಾಯಿ ಸಮಿತಿ: ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡ ಸಮಿತಿಗಳನ್ನು ಸಂಸದೀಯ ಸಮಿತಿ ಎನ್ನಲಾಗುತ್ತದೆ. ಸ್ಥಾಯಿ ಸಮಿತಿ ತಲಾ 31 ಸದಸ್ಯರನ್ನು ಹೊಂದಿರುತ್ತದೆ. ಸಂಸತ್ತಿನಲ್ಲಿ ಒಟ್ಟು 24 ಸ್ಥಾಯಿ ಸಮಿತಿಗಳಿವೆ. 10 ರಾಜ್ಯಸಭಾ ಮತ್ತು 21 ಲೋಕಸಭಾ ಸದಸ್ಯರು ಇರುತ್ತಾರೆ. ಸದ್ಯ 6 ಸ್ಥಾನಗಳು ಖಾಲಿ ಉಳಿದಿದೆ.
ಸಮತಿ ತನ್ನ ಬಳಿಗೆ ಬಂದಿರುವ ಕರಡು ಮಸೂದೆ ಬಗ್ಗೆ ಚರ್ಚಿಸುತ್ತದೆ. ತಜ್ಞರು, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸುತ್ತೆ. ಅಂತಿಮವಾಗಿ ಈ ಕುರಿತ ವರದಿ ಸಿದ್ಧಪಡಿಸುತ್ತದೆ. ಸಮಿತಿಯ ನಿರ್ಧಾರ ಬಹುತೇಕ ಸಹಮತದ ಮೂಲಕವೇ ಅಂಗೀಕಾರವಾಗಬೇಕು. ವರದಿಯ ಶಿಫಾರಸನ್ನು ಒಪ್ಪಲೇಬೇಕೆಂಬ ಕಾನೂನು ಇಲ್ಲ.
ಕಾಯ್ದೆ ಜಾರಿಗೊಳ್ಳುವುದು ಹೇಗೆ?: ಸ್ಥಾಯಿ ಸಮಿತಿ ಶಿಫಾರಸುಗಳನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಸರ್ಕಾರ ಅಂತಿಮ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ. ಉಭಯ ಸದನಗಳಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದು ಮಸೂದೆ ಅಂಗೀಕಾರವಾದ ಮೇಲೆ ರಾಷ್ಟ್ರಪತಿ ಅಂಕಿತಕ್ಕಾಗಿ ಕಳಿಸಲಾಗುತ್ತದೆ. ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದ ಮೇಲೆ ಕಾಯಿದೆ ಜನ ಲೋಕಪಾಲ ಮಸೂದೆ ಕಾಯಿದೆಯಾಗುತ್ತದೆ. ಇದನ್ನು ಸರ್ಕಾರ ತನ್ನ ಗೆಜೆಟ್ ಮೂಲಕ ಅಧಿಸೂಚನೆ ಹೊರಡಿಸಿದ ಮೇಲೆ ಕಾಯ್ದೆ ಜಾರಿಗೊಳ್ಳುತ್ತದೆ.
ಸ್ಥಾಯಿ ಸಮಿತಿಯಲ್ಲಿರುವ ಸದಸ್ಯರ ಪೈಕಿ ಸಂಸದರಾದ ಅಮರ್ ಸಿಂಗ್ ಹಾಗೂ ಲಾಲೂ ಪ್ರಸಾದ್ ಯಾದವ್ ಅವರು ಹಲವು ಹಗರಣದ ಆರೋಪಿ ಹೊತ್ತಿದ್ದರೂ ಭ್ರಷ್ಟಾಚಾರ ವಿರುದ್ಧದ ಕಾಯ್ದೆ ರೂಪಿಸುವ ಸಮಿತಿಯಲ್ಲಿ ಸ್ಥಾನ ಪಡೆದಿರುವುದು ಪ್ರಶ್ನಾರ್ಹವಾಗಿದೆ.
ಸ್ಥಾಯಿ ಸಮಿತಿಯಲ್ಲಿ ಯಾರೆಲ್ಲ ಸದಸ್ಯರಿದ್ದಾರೆ?:
* ಅಭಿಷೇಕ್ ಮನು ಶಿಂಘ್ವಿ, ಕಾಂಗ್ರೆಸ್, ರಾಜಸ್ಥಾನ
* ಮನೀಷ್ ತಿವಾರಿ, ಕಾಂಗ್ರೆಸ್, ಪಂಜಾಬ್
* ರಾಮ್ ವಿಲಾಸ್ ಪಾಸ್ವಾನ್, ಎಲ್ ಜೆಪಿ, ಬಿಹಾರ
* ಅಮರ್ ಸಿಂಗ್, ಪಕ್ಷೇತರ, ಉತ್ತರ ಪ್ರದೇಶ
* ರಾಮ್ ಜೇಠ್ಮಲಾನಿ, ಬಿಜೆಪಿ, ರಾಜಸ್ಥಾನ
* ಮೀನಾಕ್ಷಿ ನಟರಾಜನ್, ಕಾಂಗ್ರೆಸ್, ಮಂದಸೌರ್
* ಲಾಲೂ ಪ್ರಸಾದ್ ಯಾದವ್, ಆರ್ ಜೆಡಿ, ಬಿಹಾರ
* ಪರಿಮಳ್ ನಾಥ್ವಾನಿ, ಪಕ್ಷೇತರ, ಜಾರ್ಖಂಡ್
* ಬಲವಂತ್ ಅಲಿಯಾಸ್ ಬಾಲ್ ಆಪ್ಟೆ, ಬಿಜೆಪಿ, ಮಹಾರಾಷ್ಟ್ರ
* ಓಟಿ ಲೆಪ್ಚ, ಎಸ್ ಡಿಎಫ್, ಸಿಕ್ಕಿಂ
* ಚಂದ್ರೇಶ್ ಕುಮಾರಿ, ಕಾಂಗ್ರೆಸ್, ರಾಜಸ್ಥಾನ
* ಕಿರೋರಿ ಲಾಲ್ ಮೀನಾ, ಪಕ್ಷೇತರ, ರಾಜಸ್ಥಾನ
* ಡಿಬಿ ಚಂದ್ರೇಗೌಡ, ಬಿಜೆಪಿ, ಕರ್ನಾಟಕ
* ಶೈಲೇಂದ್ರಕುಮಾರ್, ಎಸ್ ಪಿ, ಉತ್ತರ ಪ್ರದೇಶ
* ಹರೀನ್ ಪಾಠಕ್, ಬಿಜೆಪಿ, ಗುಜರಾತ್
* ಎನ್ ಎಸ್ ವಿ ಚಿತ್ತನ್, ಕಾಂಗ್ರೆಸ್, ತಮಿಳುನಾಡು
* ದೀಪಾ ದಾಶ್ ಮುನ್ಶಿ, ಕಾಂಗ್ರೆಸ್, ಪಶ್ಛಿಮ ಬಂಗಾಳ
* ಜ್ಯೋತಿ ಧುರ್ವೆ, ಬಿಜೆಪಿ, ರಾಜಸ್ಥಾನ
* ಮೊನಝಿರ್ ಹಸನ್, ಜೆಡಿಯು, ಬಿಹಾರ
* ದೆವ್ಜಿ ಎಮ್ ಪಟೇಲ್, ಬಿಜೆಪಿ, ರಾಜಸ್ಥಾನ
* ವಿಜಯ್ ಬಹದ್ದ್ರೂರ್ ಸಿಂಗ್, ಬಿಎಸ್ ಪಿ, ಉತ್ತರ ಪ್ರದೇಶ
* ಎಸ್ ಸೆಮ್ಮಲೈ, ಎಐಎಡಿಎಂಕೆ, ತಮಿಳುನಾಡು
* ಪ್ರಭಾ ಕಿಶೋರ್ ಟಿ, ಕಾಂಗ್ರೆಸ್, ಗುಜರಾತ್
* ಆರ್ ತಾಮರೈ ಸೆಲ್ವನ್, ಡಿಎಂಕೆ, ತಮಿಳುನಾಡು
* ಪಿಟಿ ಥಾಮಸ್, ಕಾಂಗ್ರೆಸ್, ಕೇರಳ