Get Updates
Get notified of breaking news, exclusive insights, and must-see stories!

ಲೋಕ ಪಾಲನೆಯಲ್ಲಿ ಸಿಂಘ್ವಿ ಅಪ್ಪ-ಮಗನ ಪಾತ್ರ

lok-pal-bill-singhvi-father-son-duo
ಹೊಸದಿಲ್ಲಿ, ಆಗಸ್ಟ್ 28: ಇದೆಂಥಾ ಕಾಕತಾಳೀಯ. ಸುಮಾರು 5 ದಶಕಗಳ ಹಿಂದೆ ಅಪ್ಪ ನೆಟ್ಟಿದ್ದ ಮರ ಇಂದು ಹೆಮ್ಮರವಾಗಿದ್ದು ಅದಕ್ಕೆ ನೀರೆರೆಯುವ ಜವಾಬ್ದಾರಿಯನ್ನು ಮಗ ಹೊತ್ತಿದ್ದಾರೆ.

1963ರಲ್ಲಿ ತಂದೆ ಎಲ್‌ವಿ ಸಿಂಘ್ವಿ ಅವರು 'ಲೋಕಪಾಲ' ಎಂಬ ಶಬ್ದವನ್ನು ಟಂಕಿಸಿದ್ದರು. ಇದೀಗ ಅವರ ಮಗ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರು ಭ್ರಷ್ಟಾಚಾರ ವಿರುದ್ಧದ ಜನ ಲೋಕಪಾಲ ಮಸೂದೆಯ ಪರಿಶೀಲನೆಯಲ್ಲಿ ತೊಡಗಿರುವ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ!

1963ರ ಎ. 3ರಂದು ಲೋಕಸಭೆಯ ಯುವ ಪಕ್ಷೇತರ ಸದಸ್ಯರಾಗಿದ್ದ ಎಲ್‌ಎಂ ಸಿಂಘ್ವಿ ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದ ವೇಳೆ 'ಓಂಬುಡ್ಸ್‌ಮನ್‌' ಎಂಬ ಸ್ಕಾಂಡಿನೇವಿಯಾ ಶಬ್ದಕ್ಕೆ 'ಲೋಕಪಾಲ' ಎಂಬ ಭಾರತೀಯ ಶಬ್ದವನ್ನು ಸೂಚಿಸಿದ್ದರು. ಮೊದಲ ಬಾರಿಗೆ ಲೋಕಪಾಲ ಮಸೂದೆಯನ್ನು 1968ರಲ್ಲಿ ಅಂದಿನ ಗೃಹ ಸಚಿವ ವೈ.ಬಿ. ಚವಾಣ್‌ ಮಂಡಿಸಿದ್ದರು.

ಎಲ್‌.ವಿ.ಸಿಂಘ್ವಿ ಅವರ ಪುತ್ರ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರು ಈಗ ಮಸೂದೆಯ ಅಂತಿಮ ಕರಡನ್ನು ಸಿದ್ಧಪಡಿಸುತ್ತಿರುವುದು ಕಾಕತಾಳೀಯವಾಗಿದೆ. ಅವರು ತಮ್ಮ ವೈಯಕ್ತಿಕ ಮಾತ್ರವಲ್ಲದೆ ಮಹಾ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಮಸೂದೆಯನ್ನು ಬಲಿಷ್ಠಗೊಳಿಸಬೇಕಾಗಿದೆ. ಇದು ಅವರ ಸುಕೃತವೂ ಆಗಿದೆ -

ಡಾ. ಅಭಿಷೇಕ್‌ ಅವರು 'ಟೈಮ್ಸ್ ನೌ' ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶನಿವಾರ ರಾತ್ರಿ ಈ ವಿಷಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜನಲೋಕ ಪಾಲ ಜನಕನ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವುದು ಉಚಿತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+