ನಾನ್ಯಾಕೆ ಹೆಗ್ಡೆ ಕ್ಷಮೆಯಾಚಿಸಲಿ ಎಚ್ಡಿಕೆ ಸವಾಲು

HD Kumaraswamy on Hegde
ಬೆಂಗಳೂರು, ಆ.28: ಸಂತೋಷ್ ಹೆಗ್ಡೆ ಬಗ್ಗೆ ಕುಮಾರಸ್ವಾಮಿ ಆಡಿದ ಮಾತುಗಳನ್ನು ಕೇಳಿ ಕಿವಿ ಮುಚ್ಚಿಕೊಂಡು ಮಾಜಿ ಪ್ರಧಾನಿ ದೇವೇಗೌಡರು ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ತಮ್ಮ ಮಾತಿಗೆ ಬದ್ಧನಾಗಿದ್ದಾರೆ. ಹೆಗ್ಡೆ ವಿರುದ್ಧದ ಮಾತುಗಳು ಸತ್ಯ ಎಂದು ಹೇಳಿದ್ದಾರೆ.

ಸುವರ್ಣ ಸುದ್ದಿ ವಾಹಿನಿ ನಡೆಸಿದ ಸಂದರ್ಶನದ ವೇಳೆ ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ಬಗ್ಗೆ ನಾನಾಡಿದ ಮಾತುಗಳೆಲ್ಲ ಸತ್ಯ. ಈ ಕುರಿತು ನಾನು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ.

'ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಸಂತೋಷ್ ಹೆಗ್ಡೆ ಅವರ ರಾತ್ರಿ ಜೀವನದ ಬಗ್ಗೆ ಕೆಲವೇ ದಿನಗಳಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ' ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

'ಸಂತೋಷ್ ಹೆಗ್ಡೆ ಅವರ ರಾತ್ರಿ ಖರ್ಚು ವೆಚ್ಚದ ಬಗ್ಗೆ ನಾನಾಡಿದ ಮಾತುಗಳು ನೂರಕ್ಕೆ ನೂರು ಸತ್ಯ' ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ನಗರದ ಪುಲಕೇಶಿ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯದ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಘೋಷಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+