ಮಂಗಳೂರಲ್ಲಿ ಕಳ್ಳರ ಕೈಚಳಕ, ಏಳು ಅಂಗಡಿ ಲೂಟಿ
ಮಂಗಳೂರು,
ಆ. 27 : ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಸಮೂಪದ ಮೀನು ಮಾರುಕಟ್ಟೆಯ ವಾಣಿಜ್ಯ ಸಂಕೀರ್ಣದಲ್ಲಿ ಏಳು ಅಂಗಡಿಗಳಿಗೆ ಕಳ್ಳರು ಲಗ್ಗೆ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ. id="toptextpromo">ಫ್ಯಾನ್ಸಿ
ಅಂಗಡಿ, ಟಿ.ವಿ ರಿಪೇರಿ ಅಂಗಡಿ ಹೀಗೆ ಅಲ್ಲಿದ್ದ ಅಂಗಡಿಗಳ ಶೆಟ್ಟರ್ ಕಿತ್ತು ಸಾಮಾನುಗಳನ್ನು ಕಳವು ಮಾಡಿದ್ದಾರೆ. ಹಗಲು ಹೊತ್ತು ಅತ್ಯಂತ ಜನನಿಬಿಡವಾದ ಈ ವಾಣಿಜ್ಯ ಸಂಕೀರ್ಣದ ಪಕ್ಕದಲ್ಲೇ ಬಸ್ ನಿಲ್ದಾಣವಿದೆ. ಕಳೆದ ಕೆಲವು ದಿನಗಳಿಂದ ಈ ಪರಿಸರದಲ್ಲಿ ಸರಣಿ ಕಳ್ಳತನ ನಡೆಯುತ್ತಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಂಗಳೂರು
ನಗರದ ಸುರತ್ಕಲ್ ನಲ್ಲಿ ಕಳೆದ ವಾರ ಇದೇ ರೀತಿಯಲ್ಲಿ ಸರಣಿ ಕಳ್ಳತನ ಪ್ರಕರಣಗಳು ನಡೆದಿದ್ದವು. ಕಳ್ಳರು ಹಗಲು ಹೂತ್ತು ಸ್ಥಳ ಪರಿಶೀಲಿಸಿ ರಾತ್ರಿಹೊತ್ತು ಕೈಚಳಕ ತೋರಿಸುತ್ತಿದ್ದಾರೆ. ಈ ಘಟನೆಗಳಿಂದಾಗಿ ವ್ಯಾಪಾರಿಗಳು ಚಿಂತೆಗೀಡಾಗಿದ್ದು, ಕೂಡಲೆ ಸೂಕ್ತ ರಕ್ಷಣೆ ಒದಗಿಸಬೇಕು ಮತ್ತು ಕಳ್ಳತನಗಳಿಗೆ ಕಡಿವಾಣ ಹಾಕಬೇಕೆಂದು ಪೊಲೀಸರನ್ನು ಕೋರಿದ್ದಾರೆ.











Click it and Unblock the Notifications