ಸರ್ಕಾರವನ್ನೇ ಕೋರ್ಟ್ ಅಖಾಡಕ್ಕೆ ಎಳೆದ ಯಡಿಯೂರಪ್ಪ

'2008ರ ತನಕ ಕರ್ನಾಟಕದಲ್ಲಿ ಎಲ್ಲವೂ ಸರಿಯಾಗಿತ್ತು. ರಾಜ್ಯಪಾಲರಾಗಿ ಹಂಸರಾಜ್ ಭಾರದ್ವಾಜ್ ಅವರು ಅಧಿಕಾರ ವಹಿಸಿಕೊಂಡ ಮೇಲೆ ಆಡಳಿತ ಕುಸಿಯತೊಡಗಿತು. ನನ್ನ ಕಕ್ಷಿದಾರ ಯಡಿಯೂರಪ್ಪ ವಿರುದ್ಧ ವೈಯಕ್ತಿಕ ದ್ವೇಷ ಹಾಗೂ ದುರುದ್ದೇಶ ಹಾಗೂ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ರದ್ದುಗೊಳಿಸಬೇಕು' ಎಂದು ಯಡಿಯೂರಪ್ಪ ಪರ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಇಂದು ವಾದ ಮಂಡಿಸಿದರು.
ವಕೀಲ ಸಿರಾಜಿನ್ ಬಾಷಾ ಅವರು ಯಡಿಯೂರಪ್ಪ ವಿರುದ್ಧ ಸಲ್ಲಿಸಿದ್ದ ಐದು ದೂರುಗಳನ್ನು ಪರಿಗಣಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಆದೇಶಿಸಿದ್ದರು. ಆದರೆ, ಪ್ರಾಸಿಕ್ಯೂಷನ್ ಗೆ ಕ್ಯಾಬಿನೆಟ್ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಪ್ರಾಸಿಕ್ಯೂಷನ್ ಜಾರಿಗೊಂಡರೆ ಅದು ಸಂವಿಧಾನ ವಿರೋಧಿಯಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕೂಡಾ ಕೋರ್ಟ್ ಗೆ ಬಂದು ನಿಲ್ಲಬೇಕಾಗುತ್ತದೆ ಎಂದು ಜೇಠ್ಮಲಾನಿ ವಾದಿಸಿದರು.
ನ್ಯಾಯಮೂರ್ತಿ ಅಜಿತ್ ಜೆ ಬಂಜಲ್ ಹಾಗೂ ಡಿವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ಈ ಬಗ್ಗೆ ಆಕ್ಷೇಪಣಾ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಕಾಲಾವಧಿ ನೀಡಿದೆ. ಇನ್ನೊಂದು ಭೂ ಹಗರಣಾ ಕೇಸ್ ಗೆ ಸಂಬಂಧಪಟ್ಟಂತೆ ಆ.27ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಯಡಿಯೂರಪ್ಪ ಅವರು ಖುದ್ದು ಹಾಜರಾಗಬೇಕಿದೆ.











Click it and Unblock the Notifications