ಆ.30ರೊಳಗೆ ಜನ ಲೋಕಪಾಲ್ ಮಸೂದೆ ಮಂಡನೆ ಅಸಾಧ್ಯ

ಲೋಕಪಾಲ ಮಸೂದೆಯ ಬಗ್ಗೆ ಚರ್ಚೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಪ್ರಸಕ್ತ ತಿಂಗಳಲ್ಲಿ ಸರ್ಕಾರ ಮಂಡಿಸಿದ ಲೋಕಪಾಲ ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸದೀಯ ಸ್ಥಾನೀಯ ಸಮಿತಿಯ ಮುಂದಿದೆ. ಈ ಮಸೂದೆ ಬಗ್ಗೆ ಚರ್ಚೆಯಾಗಲು ಸಮಯದ ಅಗತ್ಯವಿದೆ ಎಂದು ಮನು ಸಿಂಘ್ವಿ ಹೇಳಿದರು.
ಜನಲೋಕಪಾಲ ಮಸೂದೆ ಜಾರಿಗಾಗಿ ಅಣ್ಣಾ ತಂಡ ಆಗಸ್ಟ್ 30 ಗಡುವು ವಿಧಿಸಿರುವುದನ್ನು ಖಂಡಿಸಿದ ಮನು ಸಿಂಘ್ವಿ, ದಿಢೀರ್ ಎಂದು ಮಸೂದೆ ಮಂಡನೆ, ಜಾರಿ, ಶಿಫಾರಸ್ಸು ಮಾಡಲು ಸಾಧ್ಯವಿಲ್ಲ ಎಂದರು.
ಚಳಿಗಾಲದ ಅಧಿವೇಶನದ ಕೊನೆಗೆ ಅಂದರೆ ಇನ್ನೆರಡು ವಾರಗಳಲ್ಲಿ ಜನ ಲೋಕಪಾಲ ಮಸೂದೆ ಪ್ರತಿ ಸ್ಥಾನೀಯ ಸಮಿತಿ ಪರಿಶೀಲನೆಗೆ ಬರುವ ಸಾಧ್ಯತೆಯಿದೆ, ಪ್ರಧಾನಿ ಹಾಗೂ ಸುಪ್ರೀಂಕೋರ್ಟ್ ಜಡ್ಜ್ ಅವರನ್ನು ಮಸೂದೆಯಡಿಯಲ್ಲಿ ಸೇರಿಸುವ ಬಗ್ಗೆ ಭಿನ್ನಾಭಿಪ್ರಾಯ ಮುಂದುವರೆದಿದೆ. ಎಲ್ಲಕ್ಕಿಂತ ಮೊದಲು ಸರ್ಕಾರಿ ಲೋಕಪಾಲ ಸಂಸತ್ತಿನಿಂದ ತೊಲಗಬೇಕಿದೆ.












Click it and Unblock the Notifications