ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ ಪತ್ರಕರ್ತರನ್ನು ಜೈಲಿಗೆ ಕಳಿಸಿ: ಉಗ್ರಪ್ಪ

By Mahesh
|
Google Oneindia Kannada News

MLC VS Ugrappa
ಬೆಂಗಳೂರು, ಆ.25:ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತರ ಸುಪರ್ದಿಯಲ್ಲಿ ತನಿಖೆ ನಡೆಸಿರುವ ಯು.ವಿ. ಸಿಂಗ್ ವರದಿಯಲ್ಲಿ ಉಲ್ಲೇಖವಾದ ಎಲ್ಲ ಪತ್ರಕರ್ತರ ವಿರುದ್ದ ಯಾವುದೇ ಮುಲಾಜೂ ನೋಡದೆ ಕಠಿಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಯು.ವಿ.ಸಿಂಗ್ ವರದಿಯಲ್ಲಿ ಉಲ್ಲೇಖವಾಗಿರುವ ಪತ್ರಕರ್ತರಿಗೆ ಒಂದು ಕ್ಷಣವೂ ಪತ್ರಕರ್ತರ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ಅಲ್ಲದೆ ಅಂತಹ ಪತ್ರಕರ್ತರು ಹಾಗೂ ಪತ್ರಿಕಾ ಸಂಸ್ಥೆಗಳು ರಾಜ್ಯದ ಜನತೆಗೆ ಸ್ಪಷ್ಟೀಕರಣ ನೀಡಬೇಕೆಂದು ಉಗ್ರಪ್ಪ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಕಾವಲುಗಾರರಿದ್ದಂತೆ. ಸಮಾಜದ ಅಂಕು ಡೊಂಕು ತಿದ್ದಬೇಕಿರುವ ಪತ್ರಿಕೋದ್ಯಮಕ್ಕೂ ಭ್ರಷ್ಟಾಚಾರದ ಕಳಂಕ
ತಟ್ಟಿರುವುದು ವಿಷಾದನೀಯ ಎಂದರು. ಬೇರೆಯವರು ತಪ್ಪು ಮಾಡಿದ್ದರೆ ಸುಮ್ಮನೆ ಬಿಡುತ್ತಿದ್ದಿರೇನು ಎಂಬ ಪ್ರಶ್ನೆಯನ್ನೂ ಸಹ ಎಸೆಯಲು ಉಗ್ರಪ್ಪ ಮರೆಯಲಿಲ್ಲ.

English summary
Congress leader MLC VS Ugrappa has urged that corrupt journalists indicated in illegal mining report by Dr. UV Singh should be sent to jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X