ಕೇಸ್ ಮೇಲೆ ಕೇಸ್ ಯಡ್ಡಿ ವಕೀಲ ಜೋಳಿಗೆ ತುಂಬಾ ಕಾಸು

ಲೋಕಾಯೂಕ್ತ ಪೊಲೀಸರು ಹಾಕಿರುವ 2 ಕೇಸ್, ಭೂ ಹಗರಣ ಕೇಸ್, ಭದ್ರಾ ಮೇಲ್ದಂಡೆ ಕಿಕ್ ಬ್ಯಾಕ್ ಸೇರಿದಂತೆ ತಮ್ಮ ವಿರುದ್ಧದ ಕೇಸುಗಳನ್ನು ಸರಿಯಾದ ನಿಟ್ಟಿನಲ್ಲಿ ಹ್ಯಾಂಡಲ್ ಮಾಡಲು ಹಿರಿಯ ವಕೀಲ ರವಿ ನಾಯ್ಕ್‌ಗೆ ಯಡಿಯೂರಪ್ಪ ಅವರು ಮೂರು ಕೋಟಿ ರುಪಾಯಿ ನೀಡಿದ್ದಾರೆ ಎಂಬ ಸುದ್ದಿಯಿದೆ.
ಮತ್ತೊಬ್ಬ ಹಿರಿಯ ವಕೀಲ ರಾಮ್ ಜೇಠ್ಮಲಾನಿಗೆ ಒಂದು ಹಾಜರಾತಿಗೆ 40 ಲಕ್ಷ ರುಪಾಯಿಯಂತೆ ಪ್ಯಾಕೇಜ್ ನಿಗದಿಯಾಗಿದೆಯಂತೆ.
ಸಮನ್ಸ್ ಗಳ ಕಾಟ : ಇದಲ್ಲದೆ ಮನಿ ಲಾಂಡರಿಂಗ್ ಕೇಸ್ ತಗುಲಾಕಿಕೊಂಡರೆ ನಿರೀಕ್ಷಣಾ ಜಾಮೀನು ಸಿಗುವುದು ಕಷ್ಟ. ವಿಚಾರಣೆಗಾಗಿ ತನ್ನನ್ನು ಕೂಡಾ ಬಂಧಿಸಿ ಕಟ್ಟಾದ್ವಯರಂತೆ ಜೈಲಿ ಕಂಬಿ ಎಣಿಸಲು ಹಾಕುತ್ತಾರೆ ಎಂಬ ಭೀತಿ ಯಡಿಯೂರಪ್ಪ ಅವರನ್ನು ಕಾಡುತ್ತಿದೆ.
ಸಮನ್ಸ್ ಗಳ ಕಾಟ, ಬಂಧನ, ಜೈಲು ಭೀತಿಯಿಂದ ಪಾರಾಗಲು ಹೆಸರಾಂತ ವಕೀಲರ ದಂಡನ್ನು ಕರೆಸಿಕೊಂಡು ಯಡಿಯೂರಪ್ಪ ಸಮಾಲೋಚನೆ ನಡೆಸಿದ್ದಾರೆ. ಸಾಗರ್ ಅಪೊಲೋ ಆಸ್ಪತ್ರೆಯಿಂದ ಹೊರಬಿದ್ದ ನಂತರ ರೇಸ್ ಕೋರ್ಸ್ ನಿವಾಸದಲ್ಲಿ ದೀರ್ಘ ಸಮಯದವರೆಗೂ ಚರ್ಚೆ ನಡೆದಿದೆ ಎಂಬ ಸುದ್ದಿ ಸಿಕ್ಕಿದೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಪ್ರಮೀಳಾ ನೇಸರ್ಗಿ ಸೇರಿದಂತೆ 50ಕ್ಕೂ ಹೆಚ್ಚು ವಕೀಲರು ಬೆಳಗ್ಗಿನಿಂದ ಲೋಕಾಯುಕ್ತ ವರದಿ ಹಿಡಿದುಕೊಂಡು ಓದುತ್ತಿದ್ದಾರೆ. ಬಂಧನದಿಂದ ಬಚಾವ್ ಮಾಡಿದರೆ ವಕೀಲರ ವೃಂದಕ್ಕೆ ಕೋಟಿಗಟ್ಟಲೆ ಹಣ ನೀಡುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದರಂತೆ.












Click it and Unblock the Notifications