ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸಿ ಹರ್ಷ ವರ್ಗಾವಣೆ ಹಿಂದೆ ರವಿಶಂಕರ್ ಗುರೂಜಿ ಕೈ

By Mahesh
|
Google Oneindia Kannada News

ಮೈಸೂರು ಆ.24 : ಜಿಲ್ಲಾಧಿಕಾರಿ ಹರ್ಷ ಗುಪ್ತಾ ಅವರ ದಿಢೀರ್ ವರ್ಗಾವಣೆ ಹಿಂದೆ ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ರವಿಶಂಕರ್ ಗುರೂಜಿ ಅವರ ಕೈವಾಡ ಇರುವುದು ಸ್ಪಷ್ಟವಾಗಿದೆ.

ಆಶ್ರಮಕ್ಕೆ ಒತ್ತುವರಿ ಮಾಡಿದ್ದ ಭೂಮಿಯನ್ನು ಹಿಂಪಡೆಯಲು ಯತ್ನಿಸಿದ ಹರ್ಷರನ್ನು ವರ್ಗ ಮಾಡಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸಹಾಯ ಹಸ್ತ ಚಾಚಿದ್ದು ಖಚಿತವಾಗಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಕ್ರಮಗಳ ಸರಣಿ ಇನ್ನೂ ಮುಂದುವರೆದಿದೆ. ಮೈಸೂರು ತಾಲೂಕಿನ ಕಂದಾಯ ದಾಖಲೆಗಳ ಪ್ರಕಾರ, ರವಿಶಂಕರ್ ಸಂಚಾಲಿತ ಆರ್ಟ್ ಆಫ್ ಲಿವಿಂಗ್ (ಎಒಎಲ್) ಸರ್ಕಾರಿ ಸ್ವಾಮ್ಯದ ಐದು ಎಕರೆ ಪ್ರದೇಸವನ್ನು ಕಬಳಿಸಿ ಕಟ್ಟಡವೊಂದು ನಿರ್ಮಿಸಿದೆ.

ಎಲ್ಲಿದೆ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ(ಎಂಯುಡಿಎ)ಸೇರಿದ ಆಲನಹಳ್ಳಿಯ ಕಸಬಾ ಹೋಬಳಿಯ ಈ ಭೂಪ್ರದೇಶವು ಸರ್ವೇ ನಂಬರ್ 41 ಹೊಂದಿದೆ. ಮೂಡಾವು ಈ ಜಮೀನನ್ನು ಲೇಔಟ್ ನಿರ್ಮಿಸಲು 1985ರಿಂದಲೂ ಕಾಯ್ದಿರಿಸಿತ್ತು.

ಆದರೆ ಯಡಿಯೂರಪ್ಪ ತನ್ನ ಪ್ರಬಾವ ಯಡ್ಡಿ ಕುಮ್ಮಕ್ಕು ಬೀರಿ ಈ ಜಮೀನಿನಲ್ಲಿ ರವಿಶಂಕರ್ ಕಾಮಗಾರಿಗೆ ಐದು ಎಕ್ರೆ ಜಾಗ ಹಂಚಿಕೆ ಮಾಡಿದ್ದಾರೆ.

ಹರ್ಷಗೆ ವರ್ಗ: ಮರುಸ್ವಾಧೀನ ಪ್ರಕ್ರಿಯೆಗೆ ಮುಂದಾದ ಜಿಲ್ಲಾಡಳಿತಕ್ಕೆ ಯಡಿಯೂರಪ್ಪ ತಡೆಯೊಡ್ಡಿದ್ದಾರೆ. ಕಳೆದ ವರ್ಷ ಡಿಸೆಂಬರಿನಲ್ಲಿ ಜಿಲ್ಲಾಧಿಕಾರಿ ಹರ್ಷ ಗುಪ್ತಾ, ಎಒಎಲ್‌ಗೆ ನೀಡಿದ ಈ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವಂತೆ ಮೂಡಾಕ್ಕೆ ನೋಟಿಸು ಜಾರಿಗೊಳಿಸಿ, ಏಳು ದಿನದೊಳಗೆ ಉತ್ತರಿಸಬೇಕೆಂದು ಆದೇಶಿಸಿದ್ದರು.

ಈ ಆದೇಶ ಹೊರಡಿದ ಮೇಲೆ ಮೂಡಾ' ಅಧಿಕಾರಿಗಳು ತಹಶೀಲ್ದಾರರಿಗೆ ಪತ್ರ ಬರೆದಿದ್ದರು. ಅದರಂತೆ ತಹಶೀಲ್ದಾರ್ ಕಚೇರಿಯಿಂದ ಈ ವರ್ಷದ ಜನವರಿ
4 ರಂದು ಮತ್ತೊಂದು ನೋಟಿಸು ಜಾರಿಗೊಂಡಿತ್ತು. ಆದರೆ ಕ್ರಮ ಮಾತ್ರ ಶೂನ್ಯ! ಡಿಸಿ ಹರ್ಷ ಗುಪ್ತಾ ಮಾತ್ರ ಮೈಸೂರಿನಿಂದ ವರ್ಗಾವಣೆಗೊಳ್ಳಬೇಕಾಯಿತು.

ಆಲನಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಎಒಎಲ್ ಕಟ್ಟಡವು ಸಂಪೂರ್ಣ ಅಕ್ರಮವಾಗಿದ್ದು , ಕರ್ನಾಟಕ ಭೂ ಕಂದಾಯ ಕಾಯ್ದೆ (೧೯೬೪) ಪ್ರಕಾರ ೧,೦೦೦ ರೂಪಾಯಿ ದಂಡ ಭರಿಸಬೇಕು ಎಂದು ನೋಟಿಸಿನಲ್ಲಿ ನಿರ್ದೇಶಿಸಲಾಗಿತ್ತು . ದಂಡ ವಸೂಲಿ ಮಾಡಲು ವಿಫಲವಾಗಿದ್ದ ಪ್ರಾಧಿಕಾರವು ಸದ್ರಿ ಕಟ್ಟಡ ನೆಲಸಮ ಕಾರ್ಯಾಚರಣೆ ಬಗ್ಗೆ ಯಾವುದೇ ದಿಟ್ಟ ಹೆಜ್ಜೆ ಇಟ್ಟಿಲ್ಲ.

ಒಂದು ಹಂತದಲ್ಲಿ ದಂಡ ಭರಿಸಲು ವಿಫಲವಾಗಿರುವ ಈ ಕಟ್ಟಡದ ವಿರುದ್ಧ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಸಿಎಂ ಕಚೇರಿಯ ಪ್ರಧಾನ ಕಾರ್ಯದರ್ಶಿ ಐಎಸ್ ಎನ್ ಪ್ರಸಾದ್ ತಡೆಯೊಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

English summary
Ravishankar Guruji's Art of Living Ashram has been involved in land encroachment in Mysore. Former CM Yeddyurappa has helped AOL Ashram by asking then DC Harsha Gupta not to take any action against Guruji. It resulted in transfer of eminent IAS officer from Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X