ಜನ್ಮದಿನ ಪುರಾವೆಗೆ ಜಾತಕ ಜಾಲಾಡುವುದು ಬೇಡ: ಕೋರ್ಟ್

ಜಾತಕವು ವ್ಯಕ್ತಿಯ ಜನ್ಮದಿನದ ಪುರಾವೆಗೆ ಸ್ವೀಕಾರಾರ್ಹವಾದ ದಾಖಲೆಯೇ ಆದರೆ ಅದೊಂದು ದುರ್ಬಲ ಸಾಕ್ಷಿಯಾಗುತ್ತದೆ ಸುಪ್ರೀಂಕೋರ್ಟ್ ಈ ಹಿಂದಿನ ಆದೇಶಗಳಲ್ಲಿ ತಿಳಿಸಿರುವುದನ್ನೇ ಈಗಲೂ ಪುನರಾವರ್ತಿಸಲಾಗುತ್ತಿದೆ ಎಂದು ನ್ಯಾ. ಮುಕುಂದಕಂ ಮತ್ತು ಅನಿಲ್ ಆರ್ ದವೆ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ತಮಿಳುನಾಡಿನ ಅಧೀನ ನ್ಯಾಯಾಲಯವೊಂದರ ನ್ಯಾಯಾಧೀಶ ಮಾಣಿಕ್ಯಂ ತಮ್ಮ ಜನ್ಮ ದಿನಾಂಕವನ್ನು 24ನೆ ನವಂಬರ್ 1950ರ ಬದಲಿಗೆ 19ನೆ ಮಾರ್ಚ್ 1947ಕ್ಕೆ ಬದಲಿಸುವಂತೆ 1993ರಿಂದಲೂ ಹೋರಾಟ ನಡೆಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಆದೇಶ ನೀಡಿದೆ.
ತನ್ನ ಸೇವಾ ದಾಖಲಾತಿಗಳಲ್ಲಿ ಜನ್ಮದಿನಾಂಕವನ್ನು ತಪ್ಪಾಗಿ ನಮೂದಿಸಿರುವುದರಿಂದ ತಾನು ನಿವೃತ್ತಿಯಾಗಬೇಕಿರುವ ದಿನಾಂಕಕ್ಕಿಂತಲೂ ಮೂರು ವರ್ಷ ತಡವಾಗಿ ನಿವೃತ್ತಿಯಾಗುತ್ತಿರುವುದರಿಂದ ಇದನ್ನು ಸರಿಪಡಿಸಬೇಕೆಂದು ಮಾಣಿಕ್ಯಂ ಮದ್ರಾಸ್ ಹೈಕೋರ್ಟ್‌ನ ರಿಜಿಸ್ಟ್ರಾರಿಗೆ 1993ರಲ್ಲಿ ಮನವಿಯೊಂದನ್ನು ನೀಡಿದ್ದರು.
ಜಾತಕ ಪ್ರಾಥಮಿಕ ದಾಖಲೆ ಯಾಗಿರುವುದರಿಂದ ಅದರಲ್ಲಿ ನಮೂದಿಸಲಾಗಿರುವ ದಿನಾಂಕವನ್ನೇ ಎಚ್ಚರಿಕೆಯಿಂದ ಪರಿಗಣಿಸಬೇಕು ಎಂದಿರುವ ಕೋರ್ಟ್, ಜನ್ಮದಿನಾಂಕ ಬದಲಿಸಬೇಕೆಂದು ಮಾಣಿಕ್ಯಂ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.












Click it and Unblock the Notifications