ಅಣ್ಣಾ ಧರಣಿ: ಕಾಂಗ್ರೆಸ್ ಗೆ ಛೀಮಾರಿ ಹಾಕಿದ ಯುಎಸ್

ವಿಶ್ವಾದ್ಯಂತ ಅಹಿಂಸಾತ್ಮಕ ಪ್ರತಿಭಟನೆಗಳನ್ನು ಬೆಂಬಲಿಸುತ್ತೇವೆ ಎಂದು ಅಮೆರಿಕ ಸರ್ಕಾರ ಹೇಳಿದೆ ಎಂದು ರಾಯ್ಟರ್ ವರದಿ ಮಾಡಿತ್ತು. ಹಜಾರೆಯವರ ಪ್ರಕರಣಕ್ಕೆ ಸಂಬಂಧಿಸಿದಂತೆ, ತಾವು ಅಭಿವ್ಯಕ್ತಿ ಸ್ವಾತಂತ್ರ ಹಾಗೂ ಸಭೆ ನಡೆಸುವ ಸ್ವಾತಂತ್ರವನ್ನು ಬೆಂಬಲಿಸುತ್ತೇವೆ. ಅದನ್ನು ಮಾಡುವ ಯಾವುದೇ ದೇಶಕ್ಕೂ ಯಾವುದೇ ಪಕ್ಷಕ್ಕೂ ತಮ್ಮ ಬೆಂಬಲವಿದೆಯೆಂದು ವಕ್ತಾರೆ ವಿಕ್ಟೋರಿಯಾ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಅಮೆರಿಕದಿಂದ ಯಾವುದೇ ಬೆಂಬಲ ಘೋಷಣೆಯಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಸ್ವಾತಂತ್ರ್ಯವನ್ನು ಸ್ವಾಗತಿಸುತ್ತೇವೆ. ಕಾಂಗ್ರೆಸ್ ವಿವೇಚನೆ ಇಲ್ಲದೆ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ.
ಭ್ರಷ್ಟಾಚಾರ ವಿರುದ್ಧ ದೇಶಾದ್ಯಂತ ಜನರು ಬೀದಿಗಿಳಿದಿರುವುದರಿಂದ ಕಂಗಾಲಾಗಿರುವ ಕಾಂಗ್ರೆಸ್, ಏಕಾಂಗಿಯಾಗಿದ್ದ ಅಣ್ಣಾ ಹಜಾರೆಗೆ ದೇಶಾದ್ಯಂತ ಇಷ್ಟೊಂದು ಬೆಂಬಲ ವ್ಯಕ್ತವಾಗಿದ್ದು ಹೇಗೆ, ಇದರಲ್ಲಿ ವಿದೇಶೀ ಕೈವಾಡವಿರಬಹುದೇ ಎಂಬುದರ ಕುರಿತಾಗಿ ತನಿಖೆಯಾಗಬೇಕಿದೆ.
ದೇಶವನ್ನೇ ಅಸ್ಥಿರತೆಯತ್ತ ತಳ್ಳುವ ನಿಟ್ಟಿನಲ್ಲಿ ಯಾವುದಾದರೂ ಶಕ್ತಿಗಳು ಅಣ್ಣಾ ಹೋರಾಟವನ್ನು ಬೆಂಬಲಿಸುತ್ತಿರುವ ಸಾಧ್ಯತ್ರೆಯಿದೆ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಹೇಳಿದ್ದರು.












Click it and Unblock the Notifications