ಚಿನ್ನದ ಬೆಲೆ ಇಂದು 30 ಸಾವಿರ ರು. ಗೆ ಹತ್ತಿರ

anushka-shetty
ಇಷ್ಟು ದಿನ ಗಗನದಲ್ಲಿದ್ದ ಬಂಗಾರದ ಬೆಲೆ ಇಂದು ಗಗನದ ತುದಿಗೇ ಏರಿದೆ. ಇಂದಿನ ಬೆಲೆ 10 ಗ್ರಾಮ್ ಚಿನ್ನಕ್ಕೆ ರು. 30,000ಕ್ಕೆ ಕೇವಲ ರು. 1,500 ಕಡಿಮೆ ಅಷ್ಟೇ!

ಅಂದರೆ ಇಂದು ಬಂಗಾರದ ಬೆಲೆ 10 ಗ್ರಾಮ್ ಗೆ ಬರೋಬ್ಬರಿ ರು. 28,500.ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಏರಿಕೆ ಕಂಡಿದ್ದ ಬಂಗಾರದ ಬೆಲೆ ಇಂದು ಒಂದೇ ದಿನದಲ್ಲಿ 10 ಗ್ರಾಮ್ ಗೆ 800 ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿ ಕೂಡ ಕೆ.ಜಿ ಒಂದಕ್ಕೆ ರು. 63,000 ಆಗುವುದರೊಂದಿಗೆ- "ಚಿನ್ನ, ಬೆಳ್ಳಿ, ವಜ್ರ, ಕೆಂಪು, ಮುತ್ತು, ಹವಳ, ಸುಖ-ದುಃಖ ನೀಡುವುದು..." ಎಂದು ಹಾಡುವಂತಾಗಿದೆ.

ಈ ದಿಢೀರ್ ಬೆಲೆ ಹೆಚ್ಚಳಕ್ಕೆ ಕಾರಣಗಳೇನು?
* ಬಂಗಾರದ ಮೇಲಿನ ಜನರ ಮೋಹ
* ಅಂತಾರಾಷ್ಟ್ರೀಯ ಮಟ್ಟದಲ್ಲಿ ಷೇರು ಪೇಟೆ ಕುಸಿತ
* ಬ್ಯಾಂಕುಗಳು ಹೇರಳವಾಗಿ ಚಿನ್ನ ಖರೀದಿಸುತ್ತಿರುವುದು
* ಶ್ರಾವಣಮಾಸದ ಸಾಲು ಸಾಲು ಹಬ್ಬಗಳು
* ಮದುವೆ ಸೀಸನ್ ಹತ್ತಿ ಬರುತ್ತಿರುವುದು

ಇಂದು ಏರಿರುವ ಬೆಲೆ ಇಳಿಯದಿದ್ದರೆ ಇನ್ನು ಚಿನ್ನ ಗಗನಚುಕ್ಕಿಯೇ ಸರಿ. ಚಿನ್ನವನ್ನು ಬಿಟ್ಟು ಕೃತಕ ಚಿನ್ನವನ್ನು ಬಳಸುವ ದಿನ ಜನಸಾಮಾನ್ಯರಿಗೆ ಹತ್ತಿರ ಬಂದೀತೇ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+