ನಾಯಿಗೂಡಿಗೆ ಫುಟ್ ಪಾತ್ ಬಲಿ ಹಾಕಿದ ಅಶೋಕ್

ಅಶೋಕ್ ಅವರ ಮನೆಯ ಎದುರಿಗೆ ಫುಟ್‌ಪಾತ್‌ಗಾಗಿ 8 X 20ಅಡಿ ಅಳತೆಯ ಜಾಗವನ್ನು ಮೀಸಲಿಡಲಾಗಿದೆ. ಆದರೆ ಅಲ್ಲಿ ಎರಡು ಲ್ಯಾಬ್ರೊಡರ್ ನಾಯಿಗಳಿರುವ ಗೂಡು ಸ್ಥಾಪನೆಗೊಂಡಿದೆ. ನಾಯಿಗೂಡಿನ ದೆಸೆಯಿಂದ ಪಾದಚಾರಿಗಳು ಬೇರೆ ದಾರಿಯಿಲ್ಲದೆ ರಸ್ತೆಯಲ್ಲಿಯೇ ಚಲಿಸಬೇಕಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶೋಕ್, "ನಾನು ಫುಟ್‌ಪಾತನ್ನು ಆಕ್ರಮಿಸಿಕೊಂಡಿಲ್ಲ. ಫುಟ್‌ಪಾತನ್ನುಇದೇ ರೀತಿ ಹಲವು ಮಂದಿ ಬಳಸಿಕೊಂಡಿರುವುದನ್ನು ನಾನು ನೋಡಿದ್ದೇನೆ.
ಕೆಲವರು ಫುಟ್‌ಪಾತ್‌ಗಳಲ್ಲಿ ಗಾರ್ಡನ್ ಅಥವಾ ಮತ್ತಿತ್ತರ ಚಟುವಟಿಕೆಗಳಿಗೆ ಉಪಯೋಗಿಸಿಕೊಂಡಿದ್ದಾರೆ. ದಾರಿಹೋಕರಿಗೆ ನಾಯಿಗಳು ಎಂದೂ ತೊಂದರೆ ಕೊಟ್ಟಿಲ್ಲ ಎಂದಿದ್ದಾರೆ.
ಬಿಬಿಎಂಪಿ ಹೆಬ್ಬಾಳ ಉಪ ವಿಭಾಗದ ಕಾರ್ಯಕಾರಿ ಇಂಜಿನಿಯರ್ ವಿಜಯಕುಮಾರ್ ಅವರು ಮಾತನಾಡಿ 'ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ, ಒಂದು ವೇಳೆ ಯಾರಾದರೂ ಫುಟ್‌ಪಾತನ್ನು ಆಕ್ರಮಿಸಕೊಂಡದ್ದೇ ಆಗಿದ್ದರೆ, ಅದನ್ನು ತೆಗೆಸಲಾಗುವುದು. ನಾನು ಈ ವಿಚಾರದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ' ಎಂದು ಹೇಳಿದ್ದಾರೆ.











Click it and Unblock the Notifications