ಬಿಬಿಎಂಪಿ ಬಜೆಟ್: 1500 ಕೋಟಿ ಸಂಗ್ರಹ ಗುರಿ

ಬಜೆಟ್ ಮಂಡನೆ ನಂತರ ಮೂರು ದಿನಗಳ ಕಾಲ ಚರ್ಚೆ ನಡೆಯಲಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಆಸ್ತಿ ತೆರಿಗೆಗಳನ್ನು ತೆರಿಗೆ ಜಾಲದ ವ್ಯಾಪ್ತಿಯೊಳಗೆ ತರಲಾಗಿದೆ. ಸುಮಾರು 15,12,580 ಆಸ್ತಿಗಳನ್ನು ಜಾಲದೊಳಗೆ ತರಲಾಗಿದ್ದುಮ್ 1500 ಕೋಟಿ ರು ತೆರಿಗೆ ಸಂಗ್ರಹದ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಉಳಿದಂತೆ ಬಜೆಟ್ ನ ಮುಖ್ಯಾಂಶಗಳು ಇಂತಿದೆ:
* ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆಯಿಂದ 780 ಕೋಟಿ ರು.
* ಜಾಹೀರಾತು ನೀತಿಯಿಂದ 150 ಕೋಟಿ ರು.
* ವ್ಯಾಪಾರ ಪರವಾನಿಗೆ ಶುಲ್ಕದಿಂದ 85 ಕೋಟಿ ರು ಸಂಗ್ರಹದ ನಿರೀಕ್ಷೆಯಿದೆ.
* ಕನಕಪುರ ಹೊರ ವರ್ತುಲ ರಸ್ತೆ ಜಂಕ್ಷನ್, ಕಾರ್ಡ್ ರಸ್ತೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಮೇಲ್ಸೇತುವೆ ಹಾಗೂ ಅಂಡರ್ ಪಾಸ್ ನಿರ್ಮಾಣ.
* ನೀರು ಸರಬರಾಜು ವ್ಯವಸ್ಥೆ ಕಾಮಗಾರಿಗೆ ರಾಜ್ಯ ಸರ್ಕಾರ 250 ಕೋಟಿ ರು ಅನುದಾನ ಕಾಯ್ದಿರಿಸಲಾಗಿದೆ.
* ನಿರಾಶ್ರಿತರಿಗೆ ತಂಗುದಾಣಗಳನ್ನು ನಿರ್ಮಿಸಲು ಯೋಜನೆ.
9196.09 ಕೋಟಿ ರು ವೆಚ್ಚದ ಬಜೆಟ್ ನಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲಾಗಿದೆ. ನಿರೀಕ್ಷೆಯಂತೆ ರಸ್ತೆ, ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿಲ್ಲ. ಆ.11 ರಂದು ಬಜೆಟ್ ಮಂಡನೆಯಾಗಬೇಕಿದ್ದ ಬಜೆಟ್, ವರಮಹಾಲಕ್ಷ್ಮಿ ಹಬ್ಬದ ಕಾರಣ ವಿಳಂಬವಾಗಿ ಮಂಡನೆಯಾಗಿದೆ.












Click it and Unblock the Notifications