ಕನಕಪುರ ಪಟ್ಟಣಕ್ಕೆ ಉಪನಗರ ಪಟ್ಟ ಪ್ರಾಪ್ತಿ

ಹೌದು, ದೇಶದ ಮಹಾನಗರಗಳ ಸಮೀಪದಲ್ಲಿರುವ ಪಟ್ಟಣಗಳನ್ನು ಉಪನಗರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಯೋಜನೆಯೊಂದನ್ನು ಹಾಕಿಕೊಂಡಿದೆ. ಪ್ರಾಯೋಗಿಕವಾಗಿ ದೇಶದ 6 ಪಟ್ಟಣಗಳಲ್ಲಿ ಜಾರಿಗೊಳ್ಳಲಿರುವ ಈ ಯೋಜನೆಗೆ ಬೆಂಗಳೂರಿಗೆ ಸಮೀಪವಿರುವ ಕನಕಪುರ ಪಟ್ಟಣವನ್ನ ಆಯ್ಕೆ ಮಾಡಲಾಗಿದೆ.
ಕೇಂದ್ರ ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವ ಸೌಗತಾ ರಾಯ್ ಅವರು ಲೋಕಸಭೆಗೆ ಈ ವಿಷಯ ತಿಳಿಸಿದ್ದಾರೆ. ಯೋಜನೆ ಪ್ರಾಯೋಗಿಕವಾಗಿ ಕನಕಪುರದ ಜತೆಗೆ ತಮಿಳುನಾಡಿನ ಶ್ರೀಪೆರಂಬದೂರು, ಆಂಧ್ರದ ವಿಕರಾಬಾದ್, ಗುಜರಾತಿನ ಸಾನಂದ್, ಹರಿಯಾಣಾದ ಸೋನೆಪಥ್ ಮತ್ತು ಮಹಾರಾಷ್ಟ್ರದ ವಸೈವಿರಾರ್ ಪಟ್ಟಣಗಳಿಗೆ ಅನ್ವಯವಾಗಲಿವೆ.
ಯೋಜನೆಯ ಮೂಲಕ ಈ ಉಪನಗರಗಳ ಅಭಿವೃದ್ಧಿಯ ವಿಸ್ತ್ರತ ಯೋಜನೆ ರೂಪುಗೊಳ್ಳಲಿದೆ. ಈ ಪಟ್ಟಣಗಳಲ್ಲಿ ಇ-ಗವರ್ನೆನ್ಸ್ ಅಳವಡಿಕೆ, ಕಂದಾಯ ವಸೂಲಿ, ನೀರಿನ ಲೆಕ್ಕಾಚಾರ ಇತ್ಯಾದಿ ಸುಧಾರಣಾ ಕ್ರಮಗಳಿಗೂ ನೆರವು ನೀಡಲಿದೆ ಎಂದು ರಾಯ್ ತಿಳಿಸಿದ್ದಾರೆ.












Click it and Unblock the Notifications