ರೇಪ್ : ನಾದಿನಿ ಹತ್ಯೆ ಮಾಡಿದ ಭೂಪನಿಗೆ 25 ವರ್ಷ ಜೈಲು
ನವದೆಹಲಿ,
ಆಗಸ್ಟ್ 16: ನಾದಿನಿಯ ಅತ್ಯಾಚಾರಕ್ಕೆ ಯತ್ನಿಸಿ, ತೀವ್ರ ಪ್ರತಿರೋಧ ವ್ಯಕ್ತಪಡಿಸಿದಾಗ ಆಕೆಯನ್ನು ದಾರುಣವಾಗಿ ಹತ್ಯೆ ಮಾಡಿದ ಭೂಪನಿಗೆ ದೆಹಲಿ ಕೋರ್ಟ್ 25 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. id="toptextpromo">ವಾಸ್ತವವಾಗಿ
ಈ ಪ್ರಕರಣದಲ್ಲಿ ಗಲ್ಲು ಶಿಕ್ಷೆಯೇ ವಿಧಿಸಬೇಕು. ತಪ್ಪಿತಸ್ಥನಿಗೆ 25 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸದ ಹೊರತು ಅವನನ್ನು ಬಿಡುಗಡೆ ಮಾಡುವಂತೆಯೇ ಇಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ. ಜತೆಗೆ, 1 ಲಕ್ಷ ರೂಪಾಯಿ ಜುಲ್ಮಾನೆಯನ್ನೂ ವಿಧಿಸಿದ್ದು, ಆ ಹಣವನ್ನು ಹತ್ಯೆಗೀಡಾದ ಮಹಿಳೆಯ ಎರಡೂವರೆ ವರ್ಷದ ಮಗಳಿಗೆ ನೀಡಬೇಕು ಎಂದೂ ಹೇಳಿದೆ. id='are-slot-1' class='oiad oi-axt oiadv'> id='top-searched-articles'>ಈ
ವಿರಳ ಪ್ರಕರಣದ ತೀರ್ಪು ನೀಡಿದ ಹೆಚ್ಚುವರಿ ಸೆಷನ್ಸ್ ಜಡ್ಜ್ ಕಾಮಿನಿ ಲಾವ್ ಅವರು ಸಾವಿಗೀಡಾದ ಮಹಿಳೆಯ ದೇಹದ ಮೇಲಿನ ಗಾಯಗಳನ್ನು ನೋಡಿದರೆ ಆಕೆ ಎಷ್ಟು ಪ್ರತಿರೋಧವೊಡ್ಡಿದ್ದಾಳೆ ಎಂಬುದು ಮನವರಿಕೆಯಾಗುತ್ತದೆ. ಆಕೆ ಎಷ್ಟು ನೋವು ಅನುಭವಿಸಿದೋ ಎಂದು ಮಮ್ಮಲಮರುಗಿದ್ದಾರೆ. ನ್ಯಾಯಾಲಯಗಳು ಜೀವಾವಧಿ ಶಿಕ್ಷೆ ವಿಧಿಸುವಾಗ ಸಾಮಾನ್ಯವಾಗಿ ಶಿಕ್ಷೆಯ ಅವಧಿಯನ್ನು ಉಲ್ಲೇಖಿಸುವುದಿಲ್ಲ. ಏಕೆಂದರೆ ಅದು 14 ವರ್ಷಕ್ಕೆ ಸೀಮಿತಗೊಳ್ಳುತ್ತದೆ. ಆದರೆ ಈ ಪ್ರಕರಣದಲ್ಲಿ ಆರೋಪಿ 25 ವರ್ಷ ಜೈಲು ಶಿಕ್ಷೆ ಸವಿಸಿ, ತನ್ನ ಪಾಪ ಕೃತ್ಯಕ್ಕೆ ತಕ್ಕ ಪ್ರಾಯಶ್ಚಿತ್ತ ಪಡಬೇಕು ಎಂದು ಅವರು ಹೇಳಿದ್ದಾರೆ.











Click it and Unblock the Notifications