ರೋಗಿಯ ಮೇಲೆ ಅತ್ಯಾಚಾರ: ವೈದ್ಯನ ಬಂಧನ

ಚಿಕಿತ್ಸೆಗೆಂದು ಹೋದಾಗ ಮತ್ತುಬರಿಸುವ ಔಷಧಿ ನೀಡಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ದೂರು ನೀಡಿದರು. ತಕ್ಷಣ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅತ್ಯಾಚಾರಕ್ಕೀಡಾಗಿರುವುದು ದೃಢಪಟ್ಟಿದೆ. ಆಪಾದಿತ ವೈದ್ಯನನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಹರಿಯಾಣಾದ ಜಾಝರ್ ಜಿಲ್ಲೆಯ ವಿವಾಹಿತ ಮಹಿಳೆ ನಾದಿನಿ ಜತೆ ಕ್ಲಿನಿಕ್ ಗೆ ಹೋಗಿದ್ದಾಗ ಈ ಹೇಯ ಘಟನೆ ನಡೆದಿದೆ. 'ಹೆಚ್ಚಿನ ಪರೀಕ್ಷೆ ಮಾಡಬೇಕು ಎಂದು ಕ್ಲಿನಿಕ್ ಒಳಗೆ ನನ್ನನ್ನು ಕರೆದೊಯ್ದ. ನನ್ನ ನಾದಿನಿಯನ್ನು ಹೊರಗೇ ಇರುವಂತೆ ಆಜ್ಞಾಪಿಸಿದ. ಒಳಗೆ ಹೋಗುತ್ತಿದ್ದಂತೆ ಔಷಧಿಯೊಂದನ್ನು ಮೂಸಿ ನೋಡುವಂತೆ ಹೇಳಿದ. ತಕ್ಞಣ ನಾನು ಪ್ರಜ್ಞೆ ತಪ್ಪಿದೆ' ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
'ಪ್ರಜ್ಞೆ ಮರುಕಳಿಸುತ್ತಿದ್ದಂತೆ ಏನು ನಡೆಯಿತು ಎಂಬುದು ಅವರ ಅರಿವಿಗೆ ಬಂದಿದೆ. ತಕ್ಷಣ ನಾದಿನಿಗೆ ವಿಷಯವನ್ನೆಲ್ಲ ತಿಳಿಸಿದ್ದಾರೆ. ಇಬ್ಬರೂ ವೈದ್ಯನನ್ನು ತರಾಟೆಗೆ ತೆಗೆದುಕೊಂಡರಾದರೂ ಅಂಥದ್ದೇನಾಗಿಲ್ಲ ಎಂದು ವೈದ್ಯ ಮಹಾಶಯ ಜಾರಿಕೊಳ್ಳಲು ಯತ್ನಿಸಿದ. ಆದರೆ ನೆಂಟರು ಸ್ಥಳಕ್ಕೆ ಬಂದು ಪೊಲೀಸರಿಗೆ ಸುದ್ದಿ ಮುಟ್ಟಿಸುವುದಾಗಿ ಹೇಳುತ್ತಿದ್ದಂತೆ ಆಪಾದಿತ ತನ್ನ ತಪ್ಪನ್ನು ಒಪ್ಪಿಕೊಂಡ. ಅನೇಕ ವರ್ಷಗಳಿಂದ ಆಯುರ್ವೇದ ಚಿಕಿತ್ಸೆಯಲ್ಲಿ ತೊಡಗಿರುವ ಆರೋಪಿಗೆ ಆಯುರ್ವೇದ ಆಚಾರ್ಯ ಎಂಬ ಬಿರುದೂ ಇದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications