ಪರಸ್ಸ್ತ್ರೀ ಸಂಗ : ಪತಿಗೆ ಪತ್ನಿಯಿಂದ ಸುಪ್ರೀಂ ಶಿಕ್ಷೆ

ನನ್ನ ಗಂಡ ಬೇರೊಬ್ಬಳೊಂದಿಗೆ ಸಂಬಂಧವಿಟ್ಟುಕೊಂಡಿದ್ದ. ನನ್ನ ಜತೆ ಮಲಗು ಬಾ ಎಂದರೆ ಆಗೊಲ್ಲ ಎನ್ನುತ್ತಿದ್ದ. ಇದರಿಂದ ತುಂಬಾನೇ ಬೇಜಾರಾಗಿತ್ತು. ಅದಕ್ಕೆ ಒಂದು ಐಡಿಯಾ ಮಾಡಿದೆ. ಅವನಿಗೆ ನಿದ್ರೆ ಮಾತ್ರೆ ಕೊಟ್ಟು ಗಡದ್ದಾಗಿ ನಿದ್ರೆ ಮಾಡುವಂತೆ ಮಾಡಿದೆ.
ಸರಿ, ಇದೇ ಸುಸುಮಯವೆಂದು ಚಾಕು ತಗೊಂಡು ಅವನ ಶಿಶ್ನವನ್ನು ಕತ್ತರಿಸಿ ಬಿಸಾಕಿದೆ. ನನ್ನೊಂದಿಗೆ ಮನಗಲು ಬಾರದ ಅವಯ್ಯ ಯಾರೊಂದಿಗೂ ಮಲಗಬಾರದು ಎಂದು ನಿರ್ಧರಿಸಿ ಈ ಕೃತ್ಯವೆಸಗಿದ್ದಾಗಿ ಮಹಿಳೆ ನ್ಯಾಯಾಲಯದಲ್ಲಿ ಹೇಳಿದ್ದಾಳೆ.
ಇನ್ನು ಪತಿರಾಯನೋ, 'ತಕ್ಷಣ ನಿದ್ದೆಯಿಂದ ಎಚ್ಚೆತ್ತವನೆ ಪರಿಪರಿಯಾಗಿ ಕೇಳಿಕೊಂಡರೂ ಹೆಂಡತಿ ಸುಮ್ಮನಾಗಲಿಲ್ಲ. ಕೊನೆಗೂ ಕತ್ತರಿಸಿಯೇ ಬಿಟ್ಟಳು' ಎಂದು ಅಲವತ್ತುಕೊಂಡಿದ್ದ. ಘಟನೆಯ ಬಳಿಕ ಅಣ್ಣನನ್ನು ಕರೆದು ಆಸ್ಪತ್ರೆಗೆ ಸೇರಿಸಿ, ಶಿಶ್ನವನ್ನು ಜೋಡಿಸಿದ್ದಳು ಪುಣ್ಯಾತಗಿತ್ತಿ. ಚೀನಾದ ಹುನಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ನ್ಯಾಯಾಲಯ ಅವಳಿಗೀಗ ಬರೋಬ್ಬರಿ 11 ವರ್ಷ ಜೈಲು ವಿಧಿಸಿದೆ.












Click it and Unblock the Notifications