ರಾಹುಲ್ ಗೆ ಕೈ ಕೊಟ್ಟು ಅಣ್ಣಾಗೆ ಜೈ ಎಂದ ರಾಖಿ?

Rakhi Shows interest on Anna Hazare
ಮುಂಬೈ, ಆ.13: ಬಾಲಿವುಡ್ ನ ಐಟಂ ರಾಣಿ ರಾಖಿ ಸಾವಂತ್ ತಿಕ್ಕಲು ಹೇಳಿಕೆಗಳು ಎಲ್ಲರಿಗೂ ಗೊತ್ತಿದೆ. ರಾಖಿ ಪ್ರಾಕ್ಟಿಕಲ್ ಜೋಕುಗಳು, ಗಣ್ಯಾತಿಗಣ್ಯರ ಮೇಲೆ ಆಕೆಯ ಪ್ರಚಾರ ಮೋಹ ಎಲ್ಲವೂ ಜನಜನಿತ. ರಾಹುಲ್ ಗಾಂಧಿ ಲುಕ್ ಗೆ ಬಾಬಾ ರಾಮದೇವ್ ಫ್ಲೆಕ್ಸಿಬಲ್ ಬಾಡಿಗೆ ಮನಸೋತಿದ್ದ ರಾಖಿ ಕಣ್ಣು ಈಗ ಗಾಂಧಿವಾದಿ ಅಣ್ಣಾ ಹಜಾರೆ ಮೇಲೆ ಬಿದ್ದಿದೆ.

ಎನ್ ಡಿಟಿವಿ ಇಮ್ಯಾಜಿನ್ ಟಿವಿ ಯ ಚಾಟ್ ಶೋ 'ಗಜಬ್ ಡೆಕ್ಸ್ ಕಿ ಅಜಬ್ ಕಹನೀಯಾ' ದಲ್ಲಿ 74 ವರ್ಷ ವಯಸ್ಸಿನ ಅಣ್ಣಾ ಹಜಾರೆ ಅವರನ್ನು ರಾಖಿ ಹಾಡಿ ಹೊಗಳಿದ್ದಾಳೆ. ಅಣ್ಣಾ ನಿಜವಾದ ಹೀರೋ, ನನ್ನ ಹೀಮ್ಯಾನ್ ಭಾರತೀಯರಿಗೆ ರೋಲ್ ಮಾಡೆಲ್, ಆಮ್ ಆದ್ಮಿಗೆ ದನಿಯಾದವರು, ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ನಿಜ ಅರ್ಥ ತಂದುಕೊಟ್ಟವರು ಎಂದು ರಾಖಿ ಹೊಗಳಿದ್ದಾಳೆ.

ರಾಖಿ ಯಾರನ್ನಾದರೂ ಹೊಗಳುತ್ತಿದ್ದಾಳೆ ಎಂದರೆ ಅದರ ಹಿಂದಿನ ಅರ್ಥ ಏನು ಎಂದು ಅರಿತಿರುವ ಪ್ರೇಕ್ಷಕರು ಆಕೆಯನ್ನು ದಿಟ್ಟಿಸಿ ನೋಡತೊಡಗಿದಾಗ, ಕೊಂಚ ತಡವರಿಸಿದ ರಾಖಿ ಮತ್ತೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಳು.

ಅಣ್ಣಾ ಅವರನ್ನು ಹೊಗಳಿದ ತಕ್ಷಣ ಅವರ ಬಗ್ಗೆ ನನಗೆ ಮೋಹ ಹುಟ್ಟಿದೆ ಎಂದರ್ಥವಲ್ಲ. ರೋಮ್ಯಾಂಟಿಕ್ ಆಗಿ ಅಣ್ಣಾ ಅವರನ್ನು ಕಾಣಲಾರೆ. ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ರಾಖಿ ಒಂದೇ ಉಸಿರಿನಲ್ಲಿ ಹೇಳಿದ್ದಾಳೆ.

ರಾಖಿ ರಗಳೆ:
32 ವರ್ಷದ ಐಟಂ ಗರ್ಲ್ ರಾಖಿ, ಇತ್ತೀಚೆಗೆ ಬಾಬಾ ರಾಮದೇವ್ ಅವರನ್ನು ಮದುವೆಯಾಗಲು ಇಚ್ಛಿಸಿರುವುದಾಗಿ ಹೇಳಿದ್ದಳು. ಅದಕ್ಕೂ ಮುನ್ನ ರಾಹುಲ್ ಗಾಂಧಿ ನನ್ನ ಕನಸಿನ ರಾಜ ಎಂದಿದ್ದಳು. ಪ್ರಚಾರ ಪ್ರಿಯೆ ರಾಖಿ ಬಾಯಿ ಬಿಟ್ಟರೆ ಬೊಂಬಾಯಿ ಎಂಬುದು ಊರಿಗೆ ಗೊತ್ತಿರುವ ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+