ಶೋಭಾಗೆ ಹೋಂ ಅಂದಿದ್ದೇ ತಡ, ಡಿಸಿಎಂ ಹುದ್ದೆ ಮಟಾಷ್

Minister Shobha Karandlaje
ಬೆಂಗಳೂರು ಆ.11: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ ಇಂಧನ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ರಾಜ್ಯದ ಗೃಹ ಸಚಿವೆಯಾಗಲಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿದ್ದೆ ತಡ ಶೆಟ್ಟರ್ ಬಣದ ಬೆನ್ನಿನಲ್ಲಿ ಚಳುಕು ಮೂಡತೊಡಗಿತು.

ಪಟ್ಟು ಬಿಡದೆ ಡಿಸಿಎಂ ಪಟ್ಟ ಬೇಕೆಂದು ಕುಕ್ಕರಗಾಲಲ್ಲಿ ಕೂತಿದ್ದ ಶೆಟ್ಟರ್ ಟಾಂಗ್ ಕೊಡಲು ಈ ರೀತಿ ಅಸ್ತ್ರವನ್ನು ಹೈಕಮಾಂಡ್ ಪ್ರಯೋಗಿಸಿತೇ ಅಥವಾ ಇದು ಎವರ್ ಸ್ಮೈಲಿಂಗ್ ಡಿವಿಎಸ್ ಪ್ಲಾನೋ ಗೊತ್ತಿಲ್ಲ. ಆದರೆ, ಡಿಸಿಎಂ ಹುದ್ದೆಗೆ ಬೇಕು ಎಂದಾದರೆ ಶೋಭಾಗೆ ಹೋಂ ಮಿನಿಸ್ಟ್ರಿ ನೀಡಬೇಕಾಗುತ್ತದೆ ಏನಂತೀರಾ ಎಂಬ ಸಂದೇಶ ಹೊರಬಿದ್ದಿದ್ದೆ ತಡ, ಅನಂತ್ ಬಳಗ ಅಯ್ಯೋ ಡಿಸಿಎಂ ಹುದ್ದೆನೇ ಬೇಡ ಎಂದು ಪ್ಲೇಟ್ ಬದಲಾಯಿಸಿತ್ತಂತೆ.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇಲ್ಲದ ಡಿಸಿಎಂ ಹುದ್ದೆಯನ್ನು ಇಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಲಾಜಿಕ್ ಆಗಿ ಹೈಕಮಾಂಡ್ ಹೇಳಿ ಸಮಸ್ಯೆ ಬಗೆಹರಿಸಿತ್ತು ಎಂದು ಎಲ್ಲೆಡೆ ಬಿಂಬಿಸಲಾಗಿದೆ. ಲಾಜಿಕ್ ಇಲ್ಲದೆ ರಾಜಕೀಯ ಮಾಡುವುದು ಕರ್ನಾಟಕದ ರಾಜಕೀಯದಲಿ ಮಾತ್ರ ಸಾಧ್ಯ ಎಂಬ ಸತ್ಯ ಗಡ್ಕರಿಗೂ ಗೊತ್ತಿದೆ.

ಶೋಭಾ ಅವರಿಗೆ ಇಂಧನ ಖಾತೆ ಜೊತೆಗೆ ಹೆಚ್ಚುವರಿಯಾಗಿ ಗೃಹ ಅಥವಾ ಗ್ರಾಮೀಣಾಭಿವೃದ್ಧಿ ನೀಡಿದರೆ ಹೇಗೆ ಎಂಬ ವಿಷಯವೂ ಚರ್ಚೆ ನಡೆದು ಎಲ್ಲವನ್ನು ಕಳೆದುಕೊಳ್ಳುವ ಭೀತಿಯ ಮುನ್ಸೂಚನೆ ಅರಿತ ಶೆಟ್ಟರ್, ಹೈಕಮಾಂಡ್ ಹೇಳಿದ್ದಾರೆ ಕೋಲೆ ಬಸವನ ರೀತಿಯಲ್ಲಿ ತಲೆ ಅಲ್ಲಾಡಿಸಿದ್ದಾರೆ.

ಈ ವಿಷ್ಯದಲ್ಲಿ ಅಶೋಕ್ ಚಕ್ರವರ್ತಿಗಳೇನು ಕಮ್ಮಿಯಿಲ್ಲ. ನಾನು ಡಿಸಿಎಂ ಆಕಾಂಕ್ಷಿ ಎಂದು ಬಹಿರಂಗವಾಗೇ ಹೇಳಿದ್ದರು. ಆದರೆ ಡಿಸಿಎಂ ಹುದ್ದೆ ಯಾಕೆ ತಪ್ಪಿತು ಎಂಬ ಅರಿವು ಅಶೋಕ್ ಸಾಹೇಬ್ರಿಗೆ ಇನ್ನೂ ಆಗಿಲ್ಲ. ಮತ್ತದೆ ಹಳೆ ಮುಖಗಳ, ಅದೇ ಹಳೆ ಖಾತೆಗಳ ಹೊಸ ಸಚಿವ ಸಂಪುಟ ರಚನೆಯಾಗಲು ವಿಳಂಬವಾಗಿದ್ದು ಈ ಕಾರಣಕ್ಕೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+