ಕಾಪು ಸಮುದ್ರದಲ್ಲಿ ಸ್ವದೇಶಿ-ವಿದೇಶಿ ನೀರುಪಾಲು

Foreigner and Indian drown
ಉಡುಪಿ, ಆ. 11 : ಉಡುಪಿ ಸಮೀಪದ ಕಾಪು ಸಮುದ್ರಕ್ಕೆ ಮೋಜಿಗೆಂದು ಇಳಿದ ಇಬ್ಬರು ನೀರುಪಾಲಾದ ಘಟನೆ ಬುಧವಾರ ಸಂಜೆ 3.30 ರಿಂದ 4 ಗಂಟೆ ಅವಧಿಯಲ್ಲಿ ನಡೆದಿದೆ.

ಸಮುದ್ರದಲ್ಲಿ ಮುಳುಗಿ ಮೃತರಾದವರನ್ನು ಅಭಿಜಿತ್‌ ಸಿಂಗ್‌ (18) ಮತ್ತು ಜಾನಾ ಕಿಶ್‌ (21) ಎಂದು ಗುರುತಿಸಲಾಗಿದೆ. ಯುವತಿ ಮೆಸಿಡೊನಿಯಾ ಮೂಲದವಳಾಗಿದ್ದರೆ, ಸಹಪಾಟಿ ಯುವಕ ಉತ್ತರ ಭಾರತ ಮೂಲದವನು ಎಂದು ಹೇಳಲಾಗಿದೆ.

ಮೋಜಿನಾಟಕ್ಕಾಗಿ ಈಜಲು ಕಡಲಿಗಿಳಿದ ವಿದೇಶಿ - ಸ್ವದೇಶಿ ವಿದ್ಯಾರ್ಥಿಗಳಿಬ್ಬರು ದುರಾದೃಷ್ಟಕರವಾಗಿ ನೀರು ಪಾಲಾದ ಘಟನೆ ಸ್ಥಳೀಯರನ್ನು ದಿಗಿಲುಗೊಳಿಸಿತು. ಕಾಪು ದೀಪಸ್ಥಂಭದ ಬಳಿ ಈ ದುರಂತ ಸಂಭವಿಸಿದೆ.

ಯುವತಿಯ ಮೃತ ದೇಹವನ್ನು ಸ್ಥಳೀಯರು ಮೇಲಕ್ಕೆತ್ತಿದ್ದು, ಯುವಕನ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಅಭಿಜಿತ್‌ ಸಿಂಗ್‌ ಮಣಿಪಾಲದ ವಿದ್ಯಾರ್ಥಿಯಾಗಿದ್ದು, ಜಾನಾ ಕಿಶ್‌ ವಿದೇಶಿ ಮೂಲದವಳಾಗಿದ್ದರೂ ಇಂಟರ್‌ಶಿಪ್ ಶಿಕ್ಷಣಕ್ಕಾಗಿ ಬೆಂಗಳೂರಿನಿಂದ ಮಣಿಪಾಲಕ್ಕೆ ಬಂದಿದ್ದಳೆಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+