ಎರಡು ಜಿಲ್ಲೆಗಳಲ್ಲಿ ಪ್ಲಾಸ್ಟಿಕ್ ಬಾವುಟ ಮಾರಾಟ ನಿಷೇಧ

ದೇಶ ಮತ್ತು ರಾಷ್ಟ್ರಧ್ವಜಗಳ ಮಹತ್ವವನ್ನು ಉಳಿಸುವ ಉದ್ದೇಶ ಹಾಗೂ ಅಪಮಾನವಾಗುವುದನ್ನು ತಡೆಯುವ ಉದ್ದೇಶದಿಂದ ಪ್ಲಾಸ್ಟಿಕ್, ಕಾಗದಗಳ ಧ್ವಜ, ರಾಷ್ಟ್ರಚಿಹ್ನೆಗಳನ್ನು ಗುರುತಿಸುವ ಕರಪತ್ರ ಹೋರ್ಡಿಂಗ್ಸ್ ಹಾಗೂ ಸ್ಟಿಕರ್‌ಗಳನ್ನು ಉಪಯೋಗಿಸದಂತೆ ನಿಷೇಧಿಸಲಾಗಿದೆ.
ಪ್ಲಾಸ್ಟಿಕ್, ಕಾಗದಗಳ ಧ್ವಜ ಮಾರಾಟ ಮಾಡುವ ಅಂಗಡಿ ಮಾಲಕರ ವಿರುದ್ಧ ಕ್ರಮ ವಹಿಸಬೇಕು ಎಂದು ಚಾಮರಾಜನಗರ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.
64ನೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರಧ್ವಜದ ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಆದೇಶ ಹೊರಡಿಸಿದ್ದಾರೆ. ಪ್ಲಾಸ್ಟಿಕ್ ಧ್ವಜಗಳ ಬಳಕೆ ಹಾಗೂ ಕಂಡಕಂಡಲ್ಲಿ ಧ್ವಜಗಳನ್ನು ಬಿಸಾಡುವುದು ಅಥವಾ ಹರಿದು ಹಾಕುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದವರು ತಿಳಿಸಿದ್ದಾರೆ.












Click it and Unblock the Notifications