ಎಣ್ಣೆಯಲ್ಲಿ ಹುರಿದ ಮೀನು ತಿಂದ ಯುವತಿ ಸಾವು

ಮೃತ ಯುವತಿ ಪಚ್ಚನಾಡಿ ದೇವಿ ನಗರದ ಮಂಜುನಾಥ ಅವರ ಪುತ್ರಿ ಸುಶ್ಮಿತಾ (17) ಎಂದು ತಿಳಿದು ಬಂದಿದೆ. ಈಕೆ ವಾಮಂಜೂರಿನ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.
ಶನಿವಾರ ರಾತ್ರಿ ಸುಶ್ಮಿತಾ ಅವರು ಮನೆಯಲ್ಲಿ ರಿಫೈನ್ ಎಣ್ಣೆಯಲ್ಲಿ ಮೀನುಗಳನ್ನು ಕಾಯಿಸಿ ತಿಂದಿದ್ದು, ಸ್ವಲ್ಪ ಸಮಯದಲ್ಲಿ ಆಕೆಗೆ ಸ್ಮೃತಿ ತಪ್ಪಿತ್ತು. ಮೀನಿನಲ್ಲಿ ವಿಷಯುಕ್ತ ಅಂಶವಿತ್ತೇ ಅಥವಾ ಎಣ್ಣೆಯಲ್ಲಿ ದೋಷವಿತ್ತೇ ಎನ್ನುವುದು ಗೊತ್ತಾಗಿಲ್ಲ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ, ಸೋಮವಾರ ಆಕೆಯ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications