ಬಸ್ ಟಾಪ್ ಮೇಲೆ ಸರಕೂ ಬೇಡ, ಪ್ರಯಾಣಿಕನೂ ಬೇಡ

ನಿಜಕ್ಕೂ ಒಳ್ಳೆಯದೆ. ಈಗಾಗಲೇ ಮೋಟಾರ್ ವಾಹನ ನಿಯಮಗಳಲ್ಲಿರುವ ಕಾನೂನನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಆದರೆ ಇದು ಖಾಸಗಿ ಪ್ರವಾಸಿ ಬಸ್‌ಗಳಷ್ಟೇ ಸೀಮಿತವಾಗದೆ ಎಲ್ಲ ವಾಹನಗಳಿಗೂ ಕಟ್ಟುನಿಟ್ಟಾಗಿ ಅನ್ವಯವಾಗಬೇಕು. ಆದರೆ ಇದರ ಮೇಲೆ ಕಣ್ಗಾವಲು ಇಡುವುದು ತುಸು ಕಷ್ಟವೇ.
ಅದಕ್ಕೆ ಮೋಟಾರ್ ವಾಹನ ಇಲಾಖೆಯೇ ಸ್ವಲ್ಪ ಮುತುವರ್ಜಿ ವಹಿಸಬೇಕು. ಬಸ್ಸಿನ ಮೇಲೆ ಲಗೇಜು ಇಡುವುದಕ್ಕೆ ಅವಕಾಶವೇ ಇಲ್ಲದಂತೆ ಜತೆಗೆ ಪ್ರಯಾಣಿಕರೂ ಇಲ್ಲಿ ಕುಳಿತುಕೊಳ್ಳುವುದಕ್ಕೆ ಸಾಧ್ಯವಾಗದಂತೆ ಮಾಡಬೇಕು. ಅಂದರೆ ಬಸ್ಸಿನ ರಚನೆಯಲ್ಲೇ ಸ್ವಲ್ಪ ಮಾರ್ಪಾಡು ಮಾಡಬೇಕು. ಛಾವಣಿಯನ್ನು ಅರ್ಧ ಗೋಲಾಕಾರದಲ್ಲಿ ಮಾಡಿದರೆ ಸಮಸ್ಯೆಯೇ ಉದ್ಭವವಾಗದು. ಇಲಾಖೆ ಇತ್ತ ಗಮನಹರಿಸಲಿ.
ಪ್ರವಾಸಿ ಬಸ್ಸಿನ ಮೇಲ್ಛಾವಣಿ ಮೇಲೆ ಯಾವುದೇ ಸರಕುಗಳನ್ನು ಸಾಗಿಸಬಾರದು ಎಂದು 1989ರ ಕೇಂದ್ರ ಮೋಟಾರ್ ವಾಹನ ನಿಯಮ 128 (9)ನೇ ವಿಧಿ ಹೇಳುತ್ತದೆ. ಆದರೆ, ಬಸ್ಸಿನ ಮೇಲೆ ಸರಕು ಸಾಗಿಸುವುದನ್ನು ನಿಷೇಧಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ಖಾಸಗಿ ಬಸ್ ಮಾಲೀಕರು ಕೋರ್ಟಿನ ಮೊರೆ ಹೋಗಿದ್ದರು.
ಖಾಸಗಿ ಬಸ್ ಮಾಲೀಕರ ಮನವಿ ತಳ್ಳಿ ಹಾಕಿದ ಪೀಠ, ಪ್ರವಾಸಿ ಬಸ್ಸುಗಳು ಲಗೇಜ್ ಸಾಗಿಸಲು ಬಸ್ಸಿನ ಹಿಂಬದಿ ಅಥವಾ ಪಕ್ಕದಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಮೇಲ್ಛಾವಣಿಯ ಮೇಲೆ ಸರಕುಗಳನ್ನು ಸಾಗಿಸುವುದರಿಂದ ಪ್ರಯಾಣಿಕರ ಜೀವಕ್ಕೆ ಅಪಾಯ ಇದೆ ಎಂದು ಹೇಳಿದೆ












Click it and Unblock the Notifications